ಮಗಳು ಮೀರಾ ಅವರ ಅನಿರೀಕ್ಷಿತ ನಿಧನದ ನಂತರ ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ತಮ್ಮ ಫೇಸ್ ಬುಕ್ ಮೂಲಕ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.ಮಗಳ ಜೊತೆಯಲ್ಲಿಯೇ ನಾನು ಸಾವನ್ನಪ್ಪಿದ್ದೇನೆ. ಮೀರಾ ಇನ್ನೂ ನನ್ನೊಂದಿಗೆ ಮಾತನಾಡುತ್ತಿರುವಂತೆ ತೋರುತ್ತಿದೆ ಮತ್ತು ಇನ್ನು ಮುಂದೆ ನಾನು ಮಾಡುವ ಯಾವುದೇ ಒಳ್ಳೆಯ ಕಾರ್ಯಗಳು ಅವಳ ಹೆಸರಿನಲ್ಲಿರುತ್ತವೆ ಎಂದು ವಿಜಯ್ ಹೇಳಿದರು.
ಮೀರಾ ಧೈರ್ಯಶಾಲಿ ಮತ್ತು ಕರುಣಾಮಯಿ ಮತ್ತು ಮಗಳು ಧರ್ಮ, ಜಾತಿ, ಮತ, ಹಣ, ಅಸೂಯೆ, ನೋವು, ಬಡತನ ಅಥವಾ ದುಷ್ಟತನವಿಲ್ಲದ ಶಾಂತಿಯುತ ಸ್ಥಳಕ್ಕೆ ಹೋಗಿದ್ದಾಳೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


