ತುಮಕೂರು: ಪರಮೇಶ್ವರ್ ರಾಜ್ಯದ ಸಿಎಂ ಆಗಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ ಅಂತ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಹೆಗ್ಗೆರೆಯಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು, ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನೊಬ್ಬನ ಆಸೆಯಲ್ಲ, ತುಮಕೂರು ಜಿಲ್ಲೆಯ ಮಹಾಜನತೆಯ ಆಸೆ ಕೂಡ ಇದೆ ಎಂದರು.
ಇದೇ ವೇಳೆ ಮಧ್ಯೆ ಮಾತನಾಡಿದ ಶಾಸಕ ಸುರೇಶ್ ಗೌಡ, ಡಿಕೆಶಿ ಕೂಡ ರೇಸ್ ನಲ್ಲಿದ್ದಾರೆ ಅನ್ನೋದನ್ನು ನೆನಪು ಮಾಡಿದರು. ಅದಕ್ಕೆ ಉತ್ತರಿಸಿದ ಸೋಮಣ್ಣ, ಅದು ಸೆಕೆಂಡ್ರಿ… ಶಿವಕುಮಾರ್ ಏನಾಗ ಬೇಕು ಅನ್ನೋದು ಹಣೆಬರಹ, ಏನಾಗುತ್ತೆ ಅನ್ನೋದು ದೊಡ್ಡದು ಎಂದರಲ್ಲದೇ, ನಡವಳಿಕೆ ಇನ್ನೂ ದೊಡ್ಡದು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


