ಮ್ಯಾನ್ಮಾರ್ ಸೇನಾ ವಿಮಾನ ಮಿಜೋರಾಂನ ಲೆಂಗ್ ಪುಯಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಜೋರಾಂ ಪೊಲೀಸ್ ಮಹಾನಿರ್ದೇಶಕ ಪ್ರಕಾರ, ಬರ್ಮಾ ಸೇನೆಯ ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ.
ಪೈಲಟ್ ನೊಂದಿಗೆ ಒಟ್ಟು 14 ಮಂದಿ ವಿಮಾನದಲ್ಲಿದ್ದು, ಆರು ಮಂದಿ ಗಾಯಗೊಂಡಿದ್ದಾರೆ, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಲೆಂಗ್ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತಕ್ಕೆ ಪಲಾಯನಗೈದಿದ್ದ ಮ್ಯಾನ್ಮಾರ್ ಸೈನಿಕರನ್ನು ಕರೆದುಕೊಂಡು ಹೋಗಲು ವಿಮಾನ ಬಂದಿತ್ತು ಎನ್ನಲಾಗಿದೆ. ಮಿಜೋರಾಂನ ಲೆಂಗ್ಪುಯಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನವು ರನ್ ವೇಯಿಂದ ಜಾರಿ ಪತನಗೊಂಡಿದೆ.


