ಸರಗೂರು: ಶಾಸಕ ಅನಿಲ್ ಚಿಕ್ಕಮಾದುರವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಆಯ್ಕೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ ಮಾತನಾಡಿ, ಕೊನೆಗೂ ದೇವರು ಕೈಬಿಡಲಿಲ್ಲ ಏಕೆಂದರೆ ಕೆಲವು ತಿಂಗಳ ಹಿಂದೆ ಎಂಡಿಸಿಸಿ ನಿರ್ದೇಶಕ ಆಯ್ಕೆ ಚುನಾವಣೆ ನಡೆದು ಶಾಸಕ ಅನಿಲ್ ಚಿಕ್ಕಮಾದು ರವರಿಗೆ 8 ಮತಗಳು ಬಿದ್ದಿದ್ದವು. ಅದರಿಂದ ಶಾಸಕರ ವಿರುದ್ಧ ಸ್ಪರ್ಧೆ ಮಾಡಿದವರಿಗೂ 8 ಮತಗಳು ಬಿದ್ದಿದ್ದವದರಿಂದ ನ್ಯಾಯಾಲಯ ತೀರ್ಪುಗಾಗಿ ಕಾದು ಕೊನೆಗೂ ಶಾಸಕರಿಗೆ ತೀರ್ಪು ಪ್ರಕಟವಾಗುತ್ತಿದ್ದಂತೆ. ತಾಲ್ಲೂಕಿನ ಜನತೆ ಶಾಸಕರ ಪರವಾಗಿ ನ್ಯಾಯ ಸಿಕ್ಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಯಾರೂ ಶಾಸಕರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸಮಬಲದ ಬಂದಿದೆ. ನಾವೇ ಗೆಲುವು ಸಾಧಿಸುವ ಭ್ರಮೆ ಇದ್ದಾರೆ. ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ನಮ್ಮ ಶಾಸಕರು ಎಂದು ವಿರುದ್ಧ ಪಕ್ಷದ ಮುಖಂಡ ತಿರುಗೇಟು ನೀಡಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ತಾಲೂಕಿನ ಜನತೆ ಯಾವುದೇ ಕಾರಣಕ್ಕೂ ಮೋಸ ಮಾಡಲು ಸಾಧ್ಯವಿಲ್ಲ. ಅವರು ಏಳು ವರ್ಷಗಳಿಂದ 24/7 ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರವರ ಗ್ರಾಮಗಳಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಪಪಂ ಸದಸ್ಯ ಚೆಲುವ ಕೃಷ್ಣ,ಅಕ್ರಮ ಸಕ್ರಮ ಸಮಿತಿ ಸದಸ್ಯರು ಎಸ್.ಎನ್.ಪ್ರಭುಸ್ವಾಮಿ, ಶಿವಶಂಕರ್, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಜಿಲ್ಲಾ ಕಾರ್ಯದರ್ಶಿ ಕಳಸೂರು ಬಸವರಾಜು, ಗ್ರಾ.ಪಂ. ಸದಸ್ಯ ಯಶವಂತಪುರ ಶಿವಲಿಂಗಯ್ಯ, ಅಭಾಲಿಂ ಯುವ ಘಟಕದ ಅಧ್ಯಕ್ಷ ಪಿ ನಂದೀಶ್, ಮುಖಂಡರು ಮಂಜುನಾಥ, ರಂಗನಾಥ್, ಯೋಗೇಶ್, ಎಸ್.ಎಸ್.ಬಸವರಾಜು, ನಾಗರಾಜರಾಮ್, ಮಣಿ ಬಿಲ್ಲಯ್ಯ, ಸುಹೇಲ್ ಲೋಕೇಶ್, ಸೂರ್ಯ ಮಣಿಕಂಠ, ಮಾದು, ದೇವರಾಜು, ದಯಾನಂದ, ಮಹೇಶ್ ಲಂಕೆ ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


