ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ಹೋರಿ ಹಬ್ಬಗಳಲ್ಲಿ ‘ಮೈಸೂರು ಹುಲಿ’ ಎಂಬ ಬಿರುದು ಪಡೆದುಕೊಂಡಿದ್ದ ಪಿ.ಪಿ.ಹೋರಿ ಎಂಬ ಎತ್ತು ಸಾರ್ವಜನಿಕರಿಗೆ ಬಹಳ ಅಚ್ಚುಮೆಚ್ಚಾಗಿದ್ದು, ಆದರೆ ದುರದೃಷ್ಟವಶಾತ್ ಈ ಹೋರಿ ಇದೀಗ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಕೆಲವು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ಹೋರಿಯನ್ನು ಉಳಿಸಿಕೊಳ್ಳಲು ಮಾಲಿಕರು ಸಾಕಷ್ಟು ಆರೈಕೆ ಮಾಡಿದ್ದರು ಆದರೆ, ಚಿಕಿತ್ಸೆ ಫಲಿಸದೆ ಎತ್ತು ಸಾವನ್ನಪ್ಪಿದೆ.
ಹೋರಿ ಹಬ್ಬಗಳಲ್ಲಿ ಮೈಸೂರು ಹುಲಿ ಬಿರುದು ಪಡೆದು ಬಹುಮಾನ ಗೆದ್ದಿದ್ದ ಪಿ.ಪಿ.ಹೋರಿಯಾ ಇನ್ನಿಲ್ಲ ಎನ್ನುವ ಸುದ್ದಿ ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಂತಾಪ ಸೂಚಿಸಿದರು.
ಪಿ.ಪಿ.ಹೋರಿಯಾ ಎತ್ತುವನ್ನು ರಾಣೆಬೆನ್ನೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಬಳಿಕ ಗೌರವ ಪೂರ್ವಕವಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ವರದಿ: ಮಂಜು, ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


