ಒಂದು ತಿಂಗಳ ಮೊದಲು ಮಧ್ಯಪ್ರದೇಶದ ಗ್ವಾಲಿಯರ್ ಬಳಿಯ ತೇಕನಾಪುರದಲ್ಲಿರುವ ಬಿಎಸ್ಎಫ್ ಅಕಾಡೆಮಿಯಿಂದ ನಾಪತ್ತೆಯಾಗಿರುವ ಇಬ್ಬರು ಮಹಿಳಾ ಪೊಲೀಸರಿಗಾಗಿ ಹಲವು ಏಜೆನ್ಸಿಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಅಂತರರಾಷ್ಟ್ರೀಯ ಗಡಿಗಳಲ್ಲಿರುವ ಬಿಎಸ್ಎಫ್ ಘಟಕಗಳಿಗೆ ಕೂಡಾ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಆದರೂ ಪತ್ತೆಯಾಗಿಲ್ಲ.
ಜಬಲ್ಪುರದ ಆಕಾಂಕ್ಷಾ ನಿಖಾರ್ ಮತ್ತು ಬಂಗಾಳದ ಮುರ್ಷಿದಾಬಾಧ್ನ ಶಹನಾ ಖಾಟೂನ್ ಎಂಬವರು 2021ರಿಂದ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇವರು 2024ರ ಜೂನ್ 6ರಂದು ಕಣ್ಮರೆಯಾಗಿದ್ದರು ಎನ್ನಲಾಗಿದೆ. ಈ ಇಬ್ಬರ ಫೋನ್ ಗಳ ಜಾಡು ಹಿಡಿದಾಗ ಸಂಶಯಾಸ್ಪದ ಚಟುವಟಿಕೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದು, ತನಿಖೆ ನಡೆಯುತ್ತಿದೆ.
ಇವರ ಫೋನ್ ಬಳಕೆ ಸ್ಥಳಗಳು ದೆಹಲಿ, ಹೌರಾ ಮತ್ತು ಬೆಹ್ರಾಂಪುರವನ್ನು ತೋರಿಸುತ್ತಿವೆ. ಫೋನ್ ದಾಖಲೆಗಳನ್ನು ಮತ್ತು ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದು, ವಿವಿಧ ರಾಜ್ಯಗಳಿಗೆ ಇವರು ಪ್ರಯಾಣ ಕೈಗೊಳ್ಳಲು ಏನು ಕಾರಣ ಎಂಬ ಅಂಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA