ಚಿಕ್ಕಬಳ್ಳಾಪುರ: ಜಿಲ್ಲೆy ಗೌರಿಬಿದನೂರು ತಾಲೂಕಿನ ಅಲ್ಕಾಪುರದ ಬಳಿ ಹರಿಯುವ ಉತ್ತರ ಪಿನಾಕಿನಿ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ.
ರಾಯರೇಖಲಹಳ್ಳಿ ನಿವಾಸಿ ಕುಂಬಿ (55) ಕೊಚ್ಚಿ ಹೋದ ವ್ಯಕ್ತಿ. ಧಾರಾಕಾರ ಮಳೆಯಿಂದ ನದಿ ತುಂಬಿ ಹರಿಯುತ್ತಿರುವಾಗ ರಸ್ತೆ ದಾಟಲು ಹೋಗಿ ಕುಂಬಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಚಿಕ್ಕಬಳ್ಲಾಪುರ ನಗರಕ್ಕೆ ಜಲಕಂಟಕ ಎದುರಾಗಿದೆ. ಕೆರೆಯ ನೀರು ನಗರದ ಬಿಬಿ ರಸ್ತೆಯ ಮೇಲೆ ಹರಿಯುತ್ತಿದ್ದು ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ನಗರಸಭೆ ಬಿಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700