nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಳೆ ಸುರಿಯುತ್ತಿದ್ದರೂ ಪಟಾಕಿ ಖರೀದಿ ಜೋರು: ಎಲ್ಲೆಡೆ ಹಬ್ಬದ ಸಂಭ್ರಮ

    October 20, 2025

    ಕೇಳಿ ಬಂತು, ಮತ್ತೊಂದು ಹುಲಿಯ ಘರ್ಜನೆ: ಕೂಂಬಿಂಗ್ ಕಾರ್ಯಾಚರಣೆ ಆರಂಭ

    October 20, 2025

    ಮಾವತ್ತೂರು ಸೊಸೈಟಿಗೆ 6 ಜನ ನಿರ್ದೇಶಕರ ರಾಜೀನಾಮೆ

    October 20, 2025
    Facebook Twitter Instagram
    ಟ್ರೆಂಡಿಂಗ್
    • ಮಳೆ ಸುರಿಯುತ್ತಿದ್ದರೂ ಪಟಾಕಿ ಖರೀದಿ ಜೋರು: ಎಲ್ಲೆಡೆ ಹಬ್ಬದ ಸಂಭ್ರಮ
    • ಕೇಳಿ ಬಂತು, ಮತ್ತೊಂದು ಹುಲಿಯ ಘರ್ಜನೆ: ಕೂಂಬಿಂಗ್ ಕಾರ್ಯಾಚರಣೆ ಆರಂಭ
    • ಮಾವತ್ತೂರು ಸೊಸೈಟಿಗೆ 6 ಜನ ನಿರ್ದೇಶಕರ ರಾಜೀನಾಮೆ
    • ತುರುವೇಕೆರೆ | ನೂರನೇ ವರ್ಷದ ಸಂಭ್ರಮಾಚರಣೆ:  ಆರ್ ಎಸ್ ಎಸ್ ಪಥಸಂಚಲನ
    • ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾದರೆ ತಡೆಯುವ ಶಕ್ತಿ ಯಾರಿಗೂ ಇಲ್ಲ: ಶಿವಾಚಾರ್ಯ ಸ್ವಾಮೀಜಿ
    • ತುಮಕೂರು | ರಾಜ್ಯದಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ
    • ಜಿಲ್ಲಾಧಿಕಾರಿ ಜೊತೆಗೆ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡ ಗೃಹ ಸಚಿವ ಪರಮೇಶ್ವರ್ !
    • ತಿಪಟೂರು: ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಾಡೋಜ ಚೆನ್ನವೀರ ಕಣವಿ ಅವರಿಗೆ ಕಸಾಪವತಿಯಿಂದ ಶ್ರದ್ಧಾಂಜಲಿ
    ಜಿಲ್ಲಾ ಸುದ್ದಿ February 18, 2022

    ನಾಡೋಜ ಚೆನ್ನವೀರ ಕಣವಿ ಅವರಿಗೆ ಕಸಾಪವತಿಯಿಂದ ಶ್ರದ್ಧಾಂಜಲಿ

    By adminFebruary 18, 2022No Comments2 Mins Read
    kasapa

    ದಾವಣಗೆರೆ:  ನಾಡಿನ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿಯವರ ನಿಧನದ ಹಿನ್ನಲೆಯಲ್ಲಿ ಅವರ ಗೌರವಾರ್ಥ  ದಾವಣಗೆರೆ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಯಿತು.

    ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ ವಾಮದೇವಪ್ಪ,  ಕಣವಿಯವರು ಸದಾ ಸಾಮಾಜಿಕ ಬದಲಾವಣೆಗೆ ತುಡಿಯುತ್ತಿದ್ದ ಸಮನ್ವಯ ಕವಿ. ಅವರಿಗೆ ಸರಕಾರವು ರಾಷ್ಟ್ರ ಕವಿ ಗೌರವ ನೀಡಬೇಕೆಂದು ಮನವಿ ಮಾಡಿದರು.


    Provided by
    Provided by
    Provided by

    ಯುವ ಪ್ರತಿಭೆಗಳನ್ನು ಪ್ರೀತಿಯಿಂದ ಬೆನ್ನು ತಟ್ಟಿ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುವ ಗುಣ ಅವರದಾಗಿತ್ತು. ಆ ಕಾರಣಕ್ಕಾಗಿ ಚೆನ್ನವೀರ ಕಣವಿ ಎಂದರೆ ಎಲ್ಲರಿಗೂ ಅತ್ಯಂತ ಪ್ರೀತಿ ಮತ್ತು ಗೌರವ ಭಾವನೆಯಿತ್ತು ಎಂದು ವಾಮದೇವಪ್ಪ ಹೇಳಿದರು.

    ಜಾನಪದ ತಜ್ಞ ಎಂ.ಜಿ.ಈಶ್ವರಪ್ಪ  ಮಾತನಾಡಿ,  ಚೆನ್ನವೀರ ಕಣವಿಯವರಂತಹ ಶ್ರೇಷ್ಠ ಕವಿಯನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. ನವೋದಯ-ನವ್ಯ ಕಾವ್ಯ ಕಾಲಘಟ್ಟದಲ್ಲಿ ಕಣವಿಯವರು ತನ್ನತನವನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ತೋರಿದ್ದು ವಿಶೇಷವಾಗಿತ್ತು ಎಂದರು.

    ರಂಗಭೂಮಿ ಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ,  ಕನ್ನಡದ ಶ್ರೇಷ್ಠ ಕವಿ ಹಾಗೂ ಬರಹಗಾರರಾಗಿದ್ದ ಚೆನ್ನವೀರ ಕಣವಿಯವರ ಸತ್ವಯುತ ಬರಹ ಹಾಗೂ ಮೌಲ್ಯಯುತ ಬದುಕು ಅನೇಕರಿಗೆ ಸ್ಪೂರ್ತಿಯುತವಾಗಿತ್ತು ಎಂದರು.

    ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಡಾ.ಹೆಚ್.ಎಸ್‌ .ಮಂಜುನಾಥ ಕುರ್ಕಿ ಮಾತನಾಡಿ, ಕಣವಿಯವರು  ಸುಮಾರು 36ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.  16 ಕವನ ಸಂಕಲನ, 5 ವಿಮರ್ಶಾ ಗ್ರಂಥಗಳು, ಹಕ್ಕಿ ಪುಕ್ಕ ಹಾಗೂ ಚಿಣ್ಣರ ಲೋಕವ ತೆರೆಯೋಣ ಎಂಬ ಎರಡು ಮಕ್ಕಳ ಪುಸ್ತಕ ಸೇರಿದಂತೆ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್.ಬಿ.ರಂಗನಾಥ್ ಮಾತನಾಡಿ, ವರ್ಷಗಳ ಸಾರ್ಥಕತೆಯ ತುಂಬು ಜೀವನ ನಡೆಸಿದ ಕಣವಿಯವರು ಸಾರಸ್ವತ ಲೋಕದ ಧೀಮಂತ ಶಕ್ತಿಯಾಗಿದ್ದರು‌. ವಿಶ್ವ ವಿನೂತನ ವಿದ್ಯಾಚೇತನ ಎಂದು ಪೋಣಿಸಿ ಸಾಹಿತ್ಯ ರಚಿಸಿದ ಕಣವಿಯವರು  ಸಾತ್ವಿಕ ತಪಸ್ವಿಯಾಗಿದ್ದರು ಎಂದರು.

    ವೈಚಾರಿಕ ಚಿಂತಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಎ.ಬಿ.ರಾಮಚಂದ್ರಪ್ಪ,  ಚನ್ನವೀರ ಕಣವಿಯವರು ಅರ್ಥ ಕಳೆದುಕೊಂಡ ಸಂಪ್ರದಾಯಗಳನ್ನು ಮೀರಿ ನಿಂತು ಹೊಸಪರಂಪರೆ ಅನುಕರಿಸುವ ಸುಧಾರಣಾವಾದಿ ಕವಿಯಾಗಿದ್ದರು. ಸಾಹಿತ್ಯ ಕೃಷಿಯೇ ಜೀವನ ಎಂದು ಬದುಕಿದ ನಾಡಿನ ಅಗ್ರಗಣ್ಯ ಕವಿಗಳ ಸಾಲಿನಲ್ಲಿ ಚನ್ನವೀರ ಕಣವಿಯವರೂ ಸಹ ಒಬ್ಬರು ಎಂಬುದಾಗಿ ತಿಳಿಸಿದರು.

    ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಜಿಲ್ಲಾ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಅವರು ಅಗಲಿದ ಕಣವಿಯವರಿಗೆ ನುಡಿನಮನವನ್ನು ಸಲ್ಲಿಸಿದರು. ಮಹಿಳಾ ಸಾಹಿತಿ ವೀಣಾ ಕೃಷ್ಣಮೂರ್ತಿಯವರು ಚೆನ್ನವೀರ ಕಣವಿಯವರ ಕುರಿತ ಸ್ವರಚಿತ ಕವನವನ್ನು ವಾಚಿಸಿ ಕಾವ್ಯನಮನ ಸಲ್ಲಿಸಿದರು‌.

    ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಗೌರವ ಕಾರ್ಯದರ್ಶಿ ಬಿ.ದಿಳ್ಯೆಪ್ಪ ವಂದಿಸಿದರು.

    ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಾನಪದ ತಜ್ಞರಾದ ಡಾ.ಎಮ್.ಜಿ.ಈಶ್ವರಪ್ಪ, ಪ್ರೊ.ಎಸ್.ಬಿ.ರಂಗನಾಥ್, ವಿಶ್ರಾಂತ ಪ್ರಾಚಾರ್ಯ ಎ.ಬಿ.ರಾಮಚಂದ್ರಪ್ಪ, ಹಿರಿಯ ಛಾಯಾಗ್ರಾಹಕ ಹೆಚ್.ಬಿ.ಮಂಜುನಾಥ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ,  ಕಾರ್ಯದರ್ಶಿಗಳಾದ ಬಿ.ದಿಳ್ಳ್ಯೆಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಜಾನಪದ ಅಕಾಡೆಮಿ ಸದಸ್ಯೆ ಸಿ.ಕೆ.ರುದ್ರಾಕ್ಷಿ ಬಾಯಿ, ಇಂದಿರಾ ಗುರುಸ್ವಾಮಿ, ರಂಗಕರ್ಮಿ ಬಾ.ಮ.ಬಸವರಾಜಯ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ, ವಿಶ್ರಾಂತ ಉಪನ್ಯಾಸಕ ಸುಭಾಷ್ ಚಂದ್ರ ಭೋಸ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎನ್.ಸ್ವಾಮಿ, ಸಂತೆ ಬೆನ್ನೂರು ಕೆ.ಸಿರಾಜ್ ಅಹಮದ್, ಬೇತೂರು ಷಡಾಕ್ಷರಪ್ಪ, ಗೋಪನಾಳ್ ಪಾಲಾಕ್ಷಪ್ಪ, ಎಮ್.ಬಿ‌.ರೇವಣಸಿದ್ದಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ,  ಎಸ್.ಎಮ್.ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ಸತ್ಯಭಾಮ,  ಶಿಕ್ಷಕಿಯರಾದ ರಾಧಾ ಎಮ್, ಕಲ್ಪನಾ, ಕೆ.ವೀಣಾ, ಎಲ್.ನಾಗವೇಣಿ, ರುಕ್ಮಾಬಾಯಿ,  ಕೂಲಂಬಿ ಜಗದೀಶ್, ಬಿ‌ಎಸ್‌.ಜಗದೀಶ್, ಸಿರಿಗೆರೆ ನಾಗರಾಜ್, ಭೈರವೇಶ್ವರ,  ಇತರರು ಉಪಸ್ಥಿತರಿದ್ದರು.

    ವರದಿ:  ಮುರುಳಿಧರನ್ ಆರ್., (ಚಿತ್ರದುರ್ಗ – ದಾವಣಗೆರೆ.)


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಮಳೆ ಸುರಿಯುತ್ತಿದ್ದರೂ ಪಟಾಕಿ ಖರೀದಿ ಜೋರು: ಎಲ್ಲೆಡೆ ಹಬ್ಬದ ಸಂಭ್ರಮ

    October 20, 2025

    ಕೇಳಿ ಬಂತು, ಮತ್ತೊಂದು ಹುಲಿಯ ಘರ್ಜನೆ: ಕೂಂಬಿಂಗ್ ಕಾರ್ಯಾಚರಣೆ ಆರಂಭ

    October 20, 2025

    ಬೀದರ್: ಜಿಲ್ಲಾ ಮಟ್ಟದಲ್ಲಿ ಪೋಷಕತ್ವ ಯೋಜನೆ ಹೊಸ ಪೋಸ್ಟರ್ ಬಿಡುಗಡೆ

    October 20, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮಳೆ ಸುರಿಯುತ್ತಿದ್ದರೂ ಪಟಾಕಿ ಖರೀದಿ ಜೋರು: ಎಲ್ಲೆಡೆ ಹಬ್ಬದ ಸಂಭ್ರಮ

    October 20, 2025

    ಸರಗೂರು:  ಬೆಳಕಿನ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ, ಸಡಗರ. ಹಿರಿಯರು ಕಿರಿಯರೆನ್ನದೆ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿಕೊಳ್ಳುವವರೇ ಹೆಚ್ಚು.…

    ಕೇಳಿ ಬಂತು, ಮತ್ತೊಂದು ಹುಲಿಯ ಘರ್ಜನೆ: ಕೂಂಬಿಂಗ್ ಕಾರ್ಯಾಚರಣೆ ಆರಂಭ

    October 20, 2025

    ಮಾವತ್ತೂರು ಸೊಸೈಟಿಗೆ 6 ಜನ ನಿರ್ದೇಶಕರ ರಾಜೀನಾಮೆ

    October 20, 2025

    ತುರುವೇಕೆರೆ | ನೂರನೇ ವರ್ಷದ ಸಂಭ್ರಮಾಚರಣೆ:  ಆರ್ ಎಸ್ ಎಸ್ ಪಥಸಂಚಲನ

    October 20, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.