ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆಯಲ್ಲಿ ನೆಲೆಸಿರುವಂತಹ ಸುಪ್ರಸಿದ್ಧ ಅಂತ್ಯ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಬುಧವಾರ ಮಧ್ಯಾಹ್ನ ಒಂದು ಗಂಟೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಆಯುಕ್ತರಾದ ವೆಂಕಟೇಶ್ ಎಂ.ವಿ. ಅವರು ಭೇಟಿ ನೀಡಿ ದೇವಸ್ಥಾನದ ಸ್ಥಿತಿಗತಿಯನ್ನು ಪರಿಶೀಲಿಸಿದರು.
ದೇವಸ್ಥಾನವನ್ನ ಪರಿಶೀಲಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ದೇವಸ್ಥಾನದ ಪುನಶ್ಚೇತನಕ್ಕಾಗಿ ಸ್ಥಳೀಯ ಶಾಸಕರು, ಹೋರಾಟಗಾರರು ಸೇರಿದಂತೆ ಅನೇಕರಿಂದ ಮನವಿ ಮಾಡಲಾಗಿತ್ತು. ಅದಾಗಿಯೂ ಕೆಲ ತಿಂಗಳುಗಳ ಹಿಂದೆ ರಾಜ್ಯಮಟ್ಟದ ವಾಸ್ತುಶಿಲ್ಪ ಸಮಿತಿಯಲ್ಲಿ ಪೂರ್ವಭಾವಿ ಚರ್ಚೆಯಾಗಿತ್ತು, ದೇವಸ್ಥಾನದ ಪುನಶ್ಚೇತನ ಅವಶ್ಯಕತೆ ಇದೆ ಎಂದು ಸಮಿತಿ ಮನಗಂಡಿದೆ, ಈ ಹಿನ್ನೆಲೆಯಲ್ಲಿ ಇಂದು ನಾನು ಆಗಮ ಶಾಸ್ತ್ರಜ್ಞರು ವಾಸ್ತುಶಿಲ್ಪಿಗಳು ಆಗಮಿಸಿದ್ದೇವೆ, ಸದ್ಯ ಈ ದೇವಸ್ಥಾನಕ್ಕೆ ಸೇರಿರುವ 12 ಎಕರೆ ಜಮೀನಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ನಿರ್ಣಯಕ್ಕೆ ಬರಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ, ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್, ವಾಸ್ತುಶಿಲ್ಪ ಸಮಿತಿಯು ಅಧ್ಯಕ್ಷೆ ರಾಜೇಶ್ವರಿ, ತಹಶೀಲ್ದಾರ್ ಡಿ ಎನ್ ವರದರಾಜು, ದೇವಸ್ಥಾನದ ಇಒ ಸುನೀಲ್ ಕುಮಾರ್, PWD AEE ಅನಿಲ್, ಆರ್ ಐ ನರಸಿಂಹ ಮೂರ್ತಿ, ಹೋರಾಟಗಾರ ನಾಗಭೂಷಣ ರೆಡ್ಡಿ, ಲೆಕ್ಕಾಧಿಕಾರಿ ರವಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q