ಪಾಕಿಸ್ತಾನ ರಾಜಕೀಯದಲ್ಲಿ ನಿನ್ನೆ ತಡರಾತ್ರಿವರೆಗೂ ನಡೆದ ರಾಜಕೀಯ ಐ ಡ್ರಾಮಾದಲ್ಲಿ ಇಮ್ರಾನ್‌ಖಾನ್ ನೇತೃತ್ವದ ಸರ್ಕಾರ ಪತನಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ನಾಯಕನ ಪ್ರಕ್ರಿಯೆ ಚುರುಕುಗೊಂಡಿದೆ.
ಶಹಬಾಜ್ ಶರೀಫ್ ಪಾಕಿಸ್ತಾನದ ನೂತನ ಪ್ರಧಾನಮಂತ್ರಿಯಾಗಲು ಇದೀಗ ವೇದಿಕೆಕೆ ಸಜ್ಜುಗೊಂಡಿದೆ.
ಮೂರುವರೆ ವರ್ಷಗಳ ಕಾಲ ಪಾಕ್ ಪ್ರಧಾನಿಯಾಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಇಮ್ರಾನ್‌ಖಾನ್ ವಿರುದ್ಧ ಪಾಕ್ ಅಸೆಂಬ್ಲಿಯಲ್ಲಿ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಸೋಲನುಭವಿಸಿ ಪದಚ್ಯುತಗೊಂಡಿದ್ದಾರೆ.
342 ಸದಸ್ಯ ಬಲದ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಪರವಾಗಿ ಚಲಾವಣೆಗೊಂಡವು. ಇದರೊಂದಿಗೆ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳ್ಳಬೇಕಾಯಿತು.
ಪಾಕಿಸ್ತಾನದ ಅಸೆಂಬ್ಲಿಯಲ್ಲಿ ನಾಳೆ ಹೊಸ ನಾಯಕರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಹೊಸದಾಗಿ ಪಾಕಿಸ್ತಾನ ಸಂಸತ್ತು ಸಮಾವೇಶಗೊಂಡು ಪ್ರತಿಪಕ್ಷ ನಾಯಕ ಶಹಬಾಜ್ ಶರೀಫ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಶಹಬಾಜ್ ಶರೀಫ್ ಪಾಕಿಸ್ತಾನದಿಂದ ಹೊರಗೆ, ಬೇರೆ ದೇಶಗಳಿಗೆ ಅಷ್ಟಾಗಿ ಪರಿಚಿತರಲ್ಲ. ಪಾಕಿಸ್ತಾನದಲ್ಲಿ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಮೂರು ಬಾರಿ ಪಾಕ್ ಪ್ರಧಾನಿಯಾಗಿದ್ದ ನವಾಜ್‌ಷರೀಫ್‌ರವರ ತಮ್ಮನಾಗಿರುವ ಶಹಬಾಜ್ ಇಮ್ರಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಐತಿಹಾಸಿಕ ಘಟನೆಯಲ್ಲಿ ಅವರು ಯಶಸ್ವಿಯಾಗಿ ವಿರೋಧ ಪಕ್ಷಗಳನ್ನು ಮುನ್ನಡೆಸಿದ್ದರು.
ಈಗಾಗಲೇ ವಿರೋಧ ಪಕ್ಷಗಳು ಪಾಕಿಸ್ತಾನ್ ಮುಸ್ಲಿಂಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶಹಬಾಜ್ ಶರೀಫ್ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿವೆ.
ನಾಯಕನಾಗಿ ಹೆಸರು ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಶಹಬಾಜ್, ಹೊಸ ಸರ್ಕಾರ ರಚನೆಯಾದರೆ ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ಹಿಂದಿನ ಕಹಿ ಮರೆತು ಮುನ್ನಡೆಯಲು ಬಯಸುತ್ತೇನೆ. ತಾವು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದೂ ಇಲ್ಲ. ಅನ್ಯಾಯ ಮಾಡುವುದಿಲ್ಲ, ಯಾವುದೇ ಕಾರಣಕ್ಕೂ ಜನರನ್ನು ಜೈಲಿಗೆ ಕಳುಹಿಸುವುದಿಲ್ಲ. ಕಾನೂನು ಮತ್ತು ನ್ಯಾಯಾಂಗ ಚೌಕಟ್ಟಿನಲ್ಲಿ ಆ ಕೆಲಸವಾಗುತ್ತದೆ ಎಂದು ತಿಳಿಸಿದರು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5