ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶ ಚುನಾವಣೆ ಆಕಾಂಕ್ಷಿಗಳ ನಾಯಕರುಗಳಿಗೆ ಒಂದು ಉತ್ಸಾಹ ವಾತಾವರಣವನ್ನು ಸೃಷ್ಟಿಸಿತ್ತು. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ವೇದಿಕೆಯನ್ನೆರಿದ್ದೆ ತಡ ಅವರ ಬಳಿ ಹೋಗಲು ಮತ್ತು ಅವರನ್ನು ಸನ್ಮಾನಿಸಿ ಸತ್ಕರಿಸಲು ಕಾಂಗ್ರೆಸ್ ನಾಯಕರುಗಳು ತುದಿಗಾಲಮೇಲೆ ನಿಂತಿದ್ದರು.
ಚುನಾವಣೆ ಅಭ್ಯರ್ಥಿ ಆಕಾಂಕ್ಷಿಗಳಂತು ನಾ ಮುಂದು ತಾ ಮುಂದು ಎಂದು ದುಂಬಾಲು ಬಿದ್ದು ಹಂಬಲಿಸುತ್ತಿದ್ದರು. ಆದರೆ ಯಾರನ್ನೂ ರಾಹುಲ್ ಗಾಂಧಿ ಅವರ ಸಮೀಪ ಬಿಡದಂತೆ ಕಣ್ಗಾವಲು ಇರಿಸಲಾಗಿತ್ತು. ಇದೆಲ್ಲರ ನಡುವೆಯೇ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿನಯ್ ನವಲಗಟ್ಟಿ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಗಳೆ ಅವರ ಜೊತೆ ಬೆಳಗಾವಿ ದಕ್ಷಿಣ್ ಮತಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಯಾದ ಪ್ರಭಾವತಿ ಚಾವಡಿ ವೇದಿಕೆ ಏರಿ ರಾಹುಲ್ ಗಾಂಧಿ ಅವರ ಸಮ್ಮುಖಕ್ಕೆ ಹೋಗಿದ್ದಾರೆ. ಇದು ಪ್ರೋಟೋಕೋಲ್ ಉಲ್ಲಂಘನೆ ಎಂದು ಸಾರ್ವಜನೀಕವಾಗಿ ಚರ್ಚೆಗಳಾಗುತ್ತಿವೆ.
ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದ್ದು ಕಂಡುಬಂತು ನಮಗಿಲ್ಲದ ಅವಕಾಶ ಪ್ರಭಾವತಿಗೆ ಹೇಗೆ ದೊರಕಿತು! ಎಂದು ಚುನಾವಣೆ ಅಭ್ಯರ್ಥಿಗಳ ಆಕಾಂಶಿಗಳಲ್ಲಿ ಗುಸು ಗುಸು ಚರ್ಚೆ ನಡೆಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


