ಮುಂಬೈ: “ಹಿಂದೂಗಳ ವಿರುದ್ಧ ಯಾರೇ ಮಾತನಾಡಿದರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಹಿಂದೂರಾಷ್ಟ್ರದಲ್ಲಿ ನೀವು ನಿತ್ಯ ಐದು ಬಾರಿ ನಮಾಜ್ ಮಾಡುವುದಕ್ಕೂ ಲೌಡ್ ಸ್ಪೀಕರ್ ಸಿಗುವುದಿಲ್ಲ ‘ ಎಂದು ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಹಾಕಿರುವ ಆರೋಪದ ಬಿಜೆಪಿ ಉಚ್ಚಾಟಿತ ಶಾಸಕ ಟಿ.ರಾಜಾ ವಿರುದ್ಧ ಕೇಸು ದಾಖಲಿಸಲಾಗಿದೆ.
ತೆಲಂಗಾಣ ಮೂಲದ ಉಚ್ಚಾಟಿತ ಶಾಸಕ ಇತ್ತೀಚೆಗೆ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ “ಹಿಂದೂಗಳನ್ನು ವಿರೋಧಿಸುವವರಿಗೆ, ಗೋವುಗಳನ್ನು ಕೊಲ್ಲುವವರನ್ನು ಮಟ್ಟಹಾಕಲು ಶಿವಾಜಿ ಸೇನೆ ಸಿದ್ಧವಾಗಿದೆ. ಭಾರತವನ್ನು 2026ರ ವೇಳೆಗೆ ಅಖಂಡ ಹಿಂದೂರಾಷ್ಟ್ರವೆಂದು ಘೋಷಿಸಲಾಗುವುದು.
ಅಹ್ಮದ್‌ನಗರವನ್ನು ಅಹಲ್ಯಾಬಾಯಿ ನಗರ, ಹೈದರಾಬಾದ್‌ನಲ್ಲಿ ಭಾಗ್ಯನಗರವೆಂದು ಮರುನಾಮಕರಣ ಮಾಡಲಾಗುವುದು’ ಎಂದು ಹೇಳಿಕೆ ನೀಡಿದ್ದಾರೆ.
ರಾಜಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದೂರು ಸಲ್ಲಿಕೆ, ದೂರಿನ ಆಧಾರದ ಮೇಲೆ ಸೆಕ್ಷನ್ 295 ಧಾರ್ಮಿಕ ಭಾವನೆಗಳಿಗೆ ಧಕ್ಕೆ, 504 ಉದ್ದೇಶಪೂರಿತ ದ್ವೇಷ ಭಾಷಣ, 506 ಕ್ರಿಮಿನಲ್ ಬೆದರಿಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿ ಸಲ್ಲಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


