ಸರಗೂರು: ತಾಲೂಕಿನಲ್ಲಿ ಯುವಕರು ಸೇರಿಕೊಂಡು ನಾಮಧಾರಿ ಗೌಡ ಸಂಘಗಳನ್ನು ಮಾಡಿಕೊಂಡು ಒಳ್ಳೆಯ ಕಾರ್ಯಕ್ರಮ ಮಾಡಿಕೊಂಡು ಎಂದು ಬರುತ್ತಿದ್ದಾರೆ. ಅದು ಸಂತೋಷದ ವಿಷಯ ಎಂದು ನಿವೃತ್ತ ಕೃಷಿ ಅಧಿಕಾರಿ ಕೃಷ್ಣಯ್ಯ ಹೇಳಿದರು.
ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯದ ಭವನದಲ್ಲಿ ಭಾನುವಾರದಂದು ನಾಮಧಾರಿ ಗೌಡ ಯುವಕರ ಸಂಘದ 15ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಮಾತ್ರ ಸಭೆ ಸಮಾರಂಭಗಳು ನಡೆಯುತ್ತವೆ. ಆದರೆ ಬೇರೆ ತಾಲೂಕಿನಲ್ಲಿ ನಾಮಧಾರಿಗೌಡರ ಸಭೆ ನಡೆಯುತ್ತಿಲ್ಲ ಎಂದು ನಾನು ಎಲ್ಲಿ ನೋಡಿಲ್ಲ ಎಂದು ತಿಳಿಸಿದರು.
ಮುಂದಿನ ಸಭೆಗಳು ಮಾಡಿದರೆ, ಬೇರೆ ತಾಲೂಕಿನಿಂದ ನಮ್ಮ ಸಮಾಜದವರಿಗೆ ಆಹ್ವಾನ ನೀಡಿ ಬರಮಾಡಿಕೊಳ್ಳಿ. ಏಕೆಂದರೆ ಎರಡು ತಾಲ್ಲೂಕುಗಳಲ್ಲಿ ಸಭೆಗಳನ್ನು ಮಾಡುವುದನ್ನು ನೋಡಿ ಕಾರ್ಯಕ್ರಮವನ್ನು ಮಾಡಲಿ ನಾವು ಕೂಡ ಕಾರ್ಯಕ್ರಮ ಮಾಡಬೇಕು ಎನ್ನುವುದು ಅವರ ಮನದಲ್ಲಿ ಹುಟ್ಟಲಿ ಎಂದು ಸಲಹೆ ನೀಡಿದರು.
ಸಂಘ ಪ್ರಾರಂಭದಲ್ಲಿ 20 ಜನ ಸದಸ್ಯರು ಇದ್ದರು. ಇವಾಗ 160 ಜನ ಸದಸ್ಯರು ಹಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಭರತ್ ರವರು ಹೇಳುತ್ತಿದ್ದರು. ಸಂಘವು ಉತ್ತಮವಾಗಿ ಬೆಳೆಯುತ್ತಿದೆ ಎಂದರು.
ನಮ್ಮ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ನಗರ ಪ್ರದೇಶಗಳುಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಕೊಂಡು ಬರುತ್ತಿದ್ದಾರೆ. ಅದರ ಪ್ರತಿಫಲ ಅವರು ಪೋಷಕರಿಗೆ ಸಲ್ಲುತ್ತದೆ ಎಂದರು.
ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ಮಾತನಾಡಿ, ಎಲ್ಲಾ ಕಡೆನ್ನು ಪ್ರತಿಭಾವಂತರು ಇದ್ದರೆ ಮಾತ್ರ ವೇದಿಕೆ ಕಲ್ಪಿಸುವುದು ಪ್ರೋತ್ಸಾಹ ನೀಡುವುದು ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗೌರವಿಸುವುದು, ಅದು ಸಂಘದ ದೊಡ್ಡ ಕೆಲಸ ಆ ಕೆಲಸವನ್ನು ನಾಮಧಾರಿಗೌಡ ಯುವಕರ ಸಂಘದ ಮಾಡಿಕೊಂಡು ಬರುತ್ತಿದ್ದಾರೆ. ಅದು ಖುಷಿ ವಿಚಾರ ಎಂದರು.
ಸಂಘವನ್ನು ಕಟ್ಟಿಕೊಂಡು 15 ವರ್ಷವಾಗಿದೆ.ಹೆಚ್ಚು ಹೆಚ್ಚು ಸವಾಲುಗಳು ಬರುತ್ತವೆ ಅದನ್ನು ಸಂಘದ ಪದಾಧಿಕಾರಿಗಳು ಧೈರ್ಯದಿಂದ ಮುನ್ನ ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಭರತ್ ಚಾಮರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಘವು ನಾವುಗಳು ಸೃಷ್ಟಿ ಮಾಡಿದಲ್ಲ, ನಮ್ಮ ಹಿರಿಯರು ಮಾಡಿಕೊಂಡು ಬರುತ್ತಿದ್ದು, ಸಂಘ ಅದನ್ನು ಮುನ್ನ ನಡೆಸಿಕೊಂಡು ಹೋಗುತ್ತಿದ್ದೆವು ಎಂದರು.
ಅಖಿಲ ನಾಮಧಾರಿಗೌಡ ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷ ಭೀಮರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ನಾಗೇಂದ್ರ, ರಾಘವೇಂದ್ರ, ಮುರುಳಿ, ಆಮಿತ್ ಕುಮಾರ್, ಆನಂದ್, ಸುಬ್ರಹ್ಮಣ್ಯ, ಮಾರುತಿ, ವೇಣುಗೋಪಾಲ್, ಸತ್ಯ ನಾರಾಯಣ, ಸತೀಶ್ ಗುಜ್ಜಪ್ಪನ ಹುಂಡಿ, ಚರಣ್, ಪದ್ಮರಾಜ್, ನಾಗೇಶ್, ಪ್ರಸನ್ನ, ಪ್ರಶಾಂತ್, ಮಹೇಶ, ಪ್ರಕಾಶ, ಚೇತನ್, ಪುನೀತ್ ಕೆ ಜಿ ಹಳ್ಳಿ, ಮಧು ಮೂರ್ತಿ, ಪಾರ್ಶ್ವನಾಥ್, ಪುನೀತ್ ಕುಮಾರ್, ಅಭಿಲಾಶ್, ಪುನೀತ್ ಮಗ್ಗೆ, ಸ್ವಾಮಿ ಹಿರೇಹಳ್ಳಿ. ನಾಗೇಂದ್ರಪ್ಪ, ಶ್ಯಾಮ್, ಕೃಷ್ಣ,ಸಂಘದ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಇನ್ನೂ ಮುಖಂಡರು ಸೇರಿದಂತೆ ಗ್ರಾಮಗಳಿಂದ ಯಜಮಾನರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC