ತುಮಕೂರು: ನಮ್ಮ ಅವಧಿಯಲ್ಲಿ ಯಾವುದೇ ಕಮೀಷನ್ ಇರಲಿಲ್ಲ. ಹಾಗೆ ಇದ್ದಿದ್ದು ಹೌದಾದರೇ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಮೀಷನ್ ಇದ್ದಿದ್ದು ಹೌದಾದರೇ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ಮಾಡಿಸಲಿ. ನ್ಯಾಯಾಂಗ ತನಿಖೆ ಆದರೆ ಎಲ್ಲಾ ಸತ್ಯಗಳು ಆಚೆ ಬರುತ್ತೆ ಎಂದರು.
ಎಂಥೆಂಥಾ ಸೂಸೈಡ್ ಕೇಸ್ ಗಳಿಗೆ ನಿಮ್ಮ ಹತ್ರ ಸರ್ಕಾರ ಇದೆ ಅಂತೇಳಿ ಬಿ-ರಿಪೋರ್ಟ್ ಹಾಕ್ತೀರಾ. ಎಲ್ಲವನ್ನೂ ಮುಚ್ಚಾಕ್ತೀರಾ ಎಂದ ಅವರು, ಮೈತ್ರಿ ಸರ್ಕಾರದಲ್ಲೂ ಕಮಿಷನ್ ದಂಧೆ ಇತ್ತು ಅನ್ನೋ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲಾ, ಇದು ಅವರನ್ನೇ ಕೇಳಿ. ಕುಮಾರಸ್ವಾಮಿ ಒಪ್ಪಿಕೊಂಡ್ರು ಅಂತಾ ನಮಗೂ ಅವರಿಗೂ ಸಂಬಂಧ ಇಲ್ಲ ಎಂದರು.
ಕೆ.ಹೆಚ್ ಮುನಿಯಪ್ಪ, ಸುಧಾಕರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಜಿಲ್ಲೆ ವಿಚಾರದಲ್ಲಿ ಏನೋ ಭೇಟಿಯಾಗಿದ್ದಾರೆ. ಮುನಿಯಪ್ಪ ಅವರು ನಮ್ಮ ಪಾರ್ಟಿಯ ದೊಡ್ಡ ಲೀಡರ್, ವರ್ಕಿಂಗ್ ಕಮಿಟಿ ಮೆಂಬರ್. ಅವರಿಗೆ ತುಂಬಾ ದೊಡ್ಡ ಜವಾಬ್ದಾರಿ ಇದೆ. ಅವರ ಜಿಲ್ಲೆ ಮತ್ತು ಸಮಾಜದ ವಿಚಾರವಾಗಿ ಅವರನ್ನ ಭೇಟಿಯಾಗಿರಬಹುದು. ಅಷ್ಟು ಬಿಟ್ಟರೇ ಬೇರೆ ಏನೂ ವಿಚಾರ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


