ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮೈಸೂರು ಬಾಂಬೆ ಮಾರ್ಗವಾಗಿ ಸಂಚರಿಸುವ ಹುಳಿಯಾರ್ ರಸ್ತೆಯ ಬಾಂಬೆ, ಹೊಸಪೇಟೆ, ಬಳ್ಳಾರಿಗೆ ತೆರಳುವ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಿರುಕು ಬಿಟ್ಟು ನಿಂತಿದ್ದ ಸೇತುವೆಯ ಕುರಿತು ನಮ್ಮತುಮಕೂರು.ಕಾಂ ವರದಿ ಮಾಡಿದ್ದು, ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಿನದ 24 ಗಂಟೆಗಳಲ್ಲೂ ವಾಹನ ಸಂಚರಿಸುವ ಈ ರಸ್ತೆಯಲ್ಲಿ ಸೇತುವೆಯೊಂದು ಬಿರುಕು ಬಿದ್ದಿದ್ದರೂ, ಯಾವುದೇ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿರಲಿಲ್ಲ. ರಸ್ತೆಯಿಂದ ಬಾಯಿ ಬಿಟ್ಟು ನಿಂತಿರುವ ಸ್ಥಿತಿಯಲ್ಲಿದ್ದ ಸೇತುವೆ ಜನರ ಪ್ರಾಣ ಬಲಿ ಪಡೆಯಲು ನಿಂತಂತೆ ಕಾಣುತ್ತಿದೆ. ಆದರೆ ಈ ರಸ್ತೆಯಲ್ಲಿ ದಿನವೂ ಸಂಚರಿಸುವ ಅಧಿಕಾರಿ ವರ್ಗ, ಸ್ಥಳೀಯ ಜನ ಪ್ರತಿನಿಧಿಗಳ್ಯಾರೂ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೇ ಮೌನಕ್ಕೆ ಶರಣಾಗಿದ್ದರು.
ಈ ಸಂಬಂಧ ಸವಿವರವಾದ ವರದಿಯನ್ನು ನಮ್ಮತುಮಕೂರು.ಕಾಂ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ ಅಧಿಕಾರಿಗಳಾದ ಸ್ಥಳೀಯ ನಗರಸಭೆ ಪೌರಾಯುಕ್ತರು ಹಾಗೂ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಕಾಮಗಾರಿ ಕೈಗೊಳ್ಳುವ ಸಾಧ್ಯತೆಗಳು ಕಂಡು ಬಂದಿದೆ. ಅಧಿಕಾರಿಗಳು ತಕ್ಷಣವೇ ಈ ಸೇತುವೆಯನ್ನು ಸಂಚಾರಕ್ಕೆ ಯೋಗ್ಯವನ್ನಾಗಿಸಿ, ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy