ಜೆಡಿಎಸ್ ಬಗ್ಗೆ ಡಾ. ಜಿ.ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ನಾನು ಸರ್ಕಾರ ನಡೆಸುವುದನ್ನ ಇವರಿಂದ ಕಲಿಯಬೇಕಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸ್ವತಂತ್ರ ಸರ್ಕಾರ ತರಬೇಕೆಂದು ನಾನು ಹೋರಾಟ ಮಾಡುತ್ತಿದ್ದೇನೆ. ಪಂಚರತ್ನ ಯೋಜನೆ ಜಾರಿಗಾಗಿ ಸ್ವತಂತ್ರ ಸರ್ಕಾರ ಕೇಳುತ್ತಿದ್ದೇನೆ. ಜೆಡಿಎಸ್ ಗೆ ಬೇಕಿರುವುದು 25 ಸ್ಥಾನ ಎಂದು ಪರಮೇಶ್ವರ್ ಹೇಳಿದ್ದಾರೆ.
ಜೆಡಿಎಸ್ ಬಗ್ಗೆ ಪರಮೇಶ್ವರ್ ಲಘುವಾಗಿ ಮಾತನಾಡಿದ್ದಾರೆ. ನನಗೆ 2 ಬಾರಿ ಅವಕಾಶ ನೀಡಿದಾಗಲೂ ನಾನು ಜನಪರ ಕೆಲಸ ಮಾಡಿದ್ದೇನೆ. ಸರ್ಕಾರ ನಡೆಸುವುದನ್ನ ನಾನು ಇವರಿಂದ ಕಲಿಯಬೇಕಿಲ್ಲ. ನಾನು ಗ್ರೌಂಡ್ ರಿಯಾಲಿಟಿಯಿಂದ ಯೋಜನೆ ಸಿದ್ದಪಡಿಸಿದ್ದೇನೆ ಎಂದರು.
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬೇರೆ ಬೇರೆ ಹೆಸರುಗಳು ಓಡಾಡುತ್ತಿದೆ. ಹೆಚ್.ಡಿ ದೇವೇಗೌಡರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಹಾಸನ ಜಿಲ್ಲೆಯ ಸಂಪೂರ್ಣ ನರನಾಡಿ ನನಗೆ ಗೊತ್ತಿಲ್ಲ . ಹಾಸನ ಜಿಲ್ಲೆ ರಾಜಕಾರಣದ ಬಗ್ಗೆ ದೇವೇಗೌಡರಿಗೆ ಇಂಚಿಂಚೂ ಗೊತ್ತು ಎಂದು ಹೆಚ್.ಡಿಕೆ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


