ನಾನು ಬಿ.ಜೆ.ಪಿ. ಸೇರಿಲ್ಲ , ಅರಸೀಕೆರೆಯ ನನ್ನ ವ್ಯಾಪಾರದ ಗೆಳೆಯ ಅರಸೀಕೆರೆ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯ ಮನೆಗೆ ಹೋದ ಸಂದರ್ಭದಲ್ಲಿ ಅವರಿಗೆ ಮತನೀಡುವಂತೆ ಕೇಳಿದ್ದೆ ಆದರೇ ಆ ವಿಡಿಯೋವನ್ನು ತಿಪಟೂರಿನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅದರ ಪ್ರಯೋಜನ ಪಡೆದುಕೊಳ್ಳಲು ಹೊರಟಿರುವುದು ವಿಪರ್ಯಾಸ ಎಂದು ಮಾಜಿ ಶಾಸಕ ಬಿ.ನಂಜಾಮರಿ ಸ್ಪಷ್ಟಪಡಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ನಮ್ಮ ಶಾಸಕರಿಗೆ ರೈತರ ಮತ್ತು ಕೊಬ್ಬರಿ ಬೆಳೆಗಾರರ ಕಷ್ಟ ಅರ್ಥವಾಗಲಿಲ್ಲ, ಆದರೆ ಈಗ ನಾನು ಬೆಂಬಲ ಬೆಲೆಕೊಡಿಸಿದ್ದೇನೆ ಎಂದು ಹೇಳುವ ಶಾಸಕರು, ರೈತರು ಪ್ರತಿಭಟನೆ ಮಾಡಬೇಕಾದರೆ ಸೌಜನ್ಯಕ್ಕಾದರು ರೈತರನ್ನು ಭೇಟಿಮಾಡಲಿಲ್ಲ, ಆಗ ರೈತರ ಮತಗಳು ಬೇಕಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ನಂಜಾಮರಿ ಅವರ ಪುತ್ರ ಚುನಾವಣೆಗೆ ಸ್ಪರ್ಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ನನ್ನನ್ನು ಚುನಾವಣೆಗೆ ನಿಲ್ಲಲು ಹೇಳಿದಾಗ, ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುತ್ತೇನೆಂದು ಗಂಗನಘಟ್ಟದ ವಡ್ಡಗಲ್ಲು ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣಮಾಡಿದ್ದೆ. ಅದಕ್ಕಾಗಿ ಅವನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ಅವನು ಸ್ಪರ್ಧಿಯಲ್ಲ, ಆದರೆ ನಾನು ಸಾಯುವುದರೊಳಗೆ ನನ್ನ ಮಕ್ಕಳನ್ನು ಶಾಸಕನನ್ನಾಗಿ ಮಾಡಿಯೇ ತೀರುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರಚನಹಳ್ಳಿ ಹೇಮೇಶ್, ಶಶಿಕುಮಾರ್ ಬನ್ನಿಹಳ್ಳಿ, ಸುನಿಲ್, ಸ್ವತಂತ್ರ ಅಭ್ಯರ್ಥಿ ವಿಜಯಕುಮಾರ್, ತುಮೂಲ್ ನಿದೇರ್ಶಕ ಮಾದಿಹಳ್ಳಿ ಪ್ರಕಾಶ್, ಎ.ಎ.ಪಿ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಮಾಜಿ ನಗರಸಭಾ ಸದಸ್ಯ ರಾಜಶೇಖರ್, ಮನೋಜ್ ಹಾವೇನಹಳ್ಳಿ, ಮುಂತಾದವರು ಹಾಜರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy