nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆಸ್ತಿ ದಾಖಲೆ ತಿದ್ದುಪಡಿ ಇನ್ಮುಂದೆ ಸುಲಭ!:  ಮನೆ ಬಾಗಿಲಲ್ಲೇ ನಡೆಯಲಿದೆ ‘ಇ–ಪೌತಿ’ ಕಾರ್ಯ

    January 30, 2026

    ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌’ಪೆಕ್ಟರ್; ಮೈದಾನದಲ್ಲೇ ಹೈಡ್ರಾಮಾ!

    January 30, 2026

    ಅಗ್ರಹಾರ ಗ್ರಾ.ಪಂ.ಅಧ್ಯಕ್ಷ ಸಿ.ಡಿ.ಪ್ರಭಾಕರ್ ಅಧ್ಯಕ್ಷತೆಯಲ್ಲಿ ವಿಶೇಷ ಚೇತನರ ಸಭೆ

    January 30, 2026
    Facebook Twitter Instagram
    ಟ್ರೆಂಡಿಂಗ್
    • ಆಸ್ತಿ ದಾಖಲೆ ತಿದ್ದುಪಡಿ ಇನ್ಮುಂದೆ ಸುಲಭ!:  ಮನೆ ಬಾಗಿಲಲ್ಲೇ ನಡೆಯಲಿದೆ ‘ಇ–ಪೌತಿ’ ಕಾರ್ಯ
    • ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌’ಪೆಕ್ಟರ್; ಮೈದಾನದಲ್ಲೇ ಹೈಡ್ರಾಮಾ!
    • ಅಗ್ರಹಾರ ಗ್ರಾ.ಪಂ.ಅಧ್ಯಕ್ಷ ಸಿ.ಡಿ.ಪ್ರಭಾಕರ್ ಅಧ್ಯಕ್ಷತೆಯಲ್ಲಿ ವಿಶೇಷ ಚೇತನರ ಸಭೆ
    • ಲಕ್ಕುಂಡಿ ಉತ್ಖನನ ವೇಳೆ ಪತ್ತೆಯಾಯ್ತು ಜೀವಂತ ಹಾವು: ‘ನಿಧಿ’ ಇರುವ ಸೂಚನೆ ಎಂದು ಗ್ರಾಮಸ್ಥರಲ್ಲಿ ಕುತೂಹಲ!
    • ಕನಕಶ್ರೀ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಪ್ರೀತಿಸಿ ಮದುವೆಯಾದ ಜೋಡಿಗೆ ‘’ಕೊಚ್ಚಿ ಹಾಕ್ತೀನಿ, ಕಡೀತೀನಿ ಅಂತ ಬೆದರಿಕೆ: ಪೊಲೀಸ್ ರಕ್ಷಣೆ ಕೋರಿದ ಪ್ರೇಮಿಗಳು
    • ಸುದೀಪ್ ತಲೆ ಏರಿತು ‘ಲೇಡೀಸ್ ಹೇರ್ ಕ್ಲಿಪ್’! ಕಿಚ್ಚನ ಹೊಸ ಸ್ಟೈಲ್ ನೋಡಿ ಫ್ಯಾನ್ಸ್ ಫಿದಾ; ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್!
    • ಕೈ ಬದಲು ಕಾಲು ತೋರಿಸಬೇಕಿತ್ತೇ?: ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ, ಸದನ ಮುಂದೂಡಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಾನು ಸಿಎಂ ಅನ್ನಬೇಡಿ, ನನ್ನ ವಿರುದ್ದ ಒಳ ಕೂಯಿಲು ಆರಂಭವಾಗುತ್ತದೆ: ಜಿ.ಪರಮೇಶ್ವರ್ ಹೇಳಿಕೆ
    ಕೊರಟಗೆರೆ January 23, 2022

    ನಾನು ಸಿಎಂ ಅನ್ನಬೇಡಿ, ನನ್ನ ವಿರುದ್ದ ಒಳ ಕೂಯಿಲು ಆರಂಭವಾಗುತ್ತದೆ: ಜಿ.ಪರಮೇಶ್ವರ್ ಹೇಳಿಕೆ

    By adminJanuary 23, 2022No Comments2 Mins Read
    g parameshwar

    ಕೊರಟಗೆರೆ:  ಕ್ಷೇತ್ರದ ಜನರು ಭಾವೋದ್ರೇಕವಾಗಿ ನಾನು ಮುಖ್ಯಮಂತ್ರಿಯಾಗಬೇಕು ಎಂದು ಭಾಷಣ ಮಾಡಬೇಡಿ. ನೀವು ಇಲ್ಲಿ ಕೂಗಿದರೆ ನನ್ನ ವಿರುದ್ದ ಒಳ ಕೂಯಿಲು ಅಲ್ಲಿ ಶುರುವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.

    ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ಸುಮಾರು 5 ಕೋಟಿ ರೂಗಳ ವೆಚ್ಚದ 17 ಕಾಮಗಾರಿಗಳನ್ನು ಶಂಕುಸ್ಥಾಪನೆ  ಶನಿವಾರ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಬ್ಬ ಮತದಾರರ ಋಣ ತೀರಿಸುವ ಕೆಲಸವನ್ನು ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸರ್ಕಾರದಿಂದ ಹಣ ತರುವುದು ಕಷ್ಟ. ಇತರ ಕ್ಷೇತ್ರಗಳನ್ನು ಗಮನಿಸಿ ನಮ್ಮ ಕ್ಷೇತ್ರವನ್ನು ಗಮನಿಸಿ. ಆಗ ಅಭಿವೃದ್ಧಿ ತಿಳಿಯುತ್ತದೆ ಎಂದರು.


    Provided by
    Provided by

    ಕ್ಷೇತ್ರ ಜನರು ನಾನು ಮುಖ್ಯಮಂತ್ರಿಯಾಗಲಿ ಎಂದು ಕೂಗುತ್ತೀರಿ. ಆದರೆ ಅದು ನಮ್ಮ ಕೈಯಲ್ಲಿ ಇಲ್ಲ. ಪಕ್ಷದ ವರಿಷ್ಠರು ಶಾಸಕರು ಸೇರಿದಂತೆ  ಹಲವು   ಹಂತಗಳಲ್ಲಿ ನಡೆಯುವ ಕೆಲಸ ಅದಾಗಿದೆ. ನಾನು ರಾಜ್ಯದ ಒಬ್ಬ ನಾಯಕ ಎಂದು ಗುರುತಿಸಿ ಮತ ಹಾಕಿ ಎಂದು ಪರಮೇಶ್ವರ್ ಮನವಿ ಮಾಡಿಕೊಂಡರು.

    ರಾಜ್ಯದಲ್ಲಿ ಸಮಿಶ್ರ ಸರ್ಕಾರದಲ್ಲಿ ನೀಡಿದಂತಹ ಆಶ್ರಯ ಮನೆಗಳಿಗೆ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿದೆ ಆದರೆ ಸರ್ಕಾರದಿಂದ ಯಾವುದೇ ಹೊಸ ಮನೆಯನ್ನು ಬಿಡುಗಡೆ ಮಾಡಿಲ್ಲ ನಾವುಗಳು ವಿಧಾನ ಸಭೆಯಲ್ಲಿ ಒತ್ತಡ ಹಾಕಿದ ಮೇಲೆ ಸರ್ಕಾರವು ಪ್ರತೀ ಪಂಚಾಯ್ತಿಗೆ 40 ಮನೆಗಳನ್ನು ನೀಡಿದೆ, ಆದರೆ ವಿಶೇಷವಾಗಿ ವಸತಿ ಸಚಿವರಾದ ವಿ. ಸೋಮಣ್ಣನವರು ನನ್ನ ಮನವಿ ಮತ್ತು ವಿಶ್ವಾಸಕ್ಕೆ ಸ್ಪಂಧಿಸಿ ಕೊರಟಗೆರೆ ಕ್ಷೇತ್ರಕ್ಕೆ 3600 ಮನೆಗಳನ್ನು ವಿಶೇಷ ಆದ್ಯತೆಯ ಮೇಲೆ ಬಿಡುಗಡೆಗೊಳಿಸಿದ್ದಾರೆ ಈ ಹಿಂದೆಯೂ ನನಗೆ 8 ಸಾವಿರ ಮನೆಗಳನ್ನು ಮಂಜೂರು ವಸತಿ ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸುತ್ತೇನೆ  ಎಂದರು.

    ಸರ್ಕಾರದಲ್ಲಿ ಭ್ರಷ್ಠಾಚಾರದ ಕೂಗು ಸಾಕಷ್ಟು ಕೇಳುತ್ತಿದೆ, ಸರ್ಕಾರದ ಕಾಮಗಾರಿ ಮತ್ತು ಕೆಲಸ ನಿರ್ವಹಿಸುವವರು, ಬಹಿರಂಗವಾಗಿಯೇ ಈ ಆರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಯಾವುದೇ ಸರ್ಕಾರವಾಗಲಿ ಜನರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದ ಅವರು ಬರುವ ಆಯ ವ್ಯಯದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕ್ಷೇತ್ರದ ಎತ್ತಿನ ಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಗಳನ್ನು ಬಿಡುಗಡೆ ಮಾಡಲಿ ಇದರಿಂದ ಬಯಲು ಸೀಮೆಯ ಜನರಿಗೆ ನೀರಿನ ನೆರವಾಗುತ್ತದೆ ನನ್ನ ಕ್ಷೇತ್ರದಲ್ಲಿ 110 ಕೆರೆಗಳು ಈ ಯೋಜನೆಯಲ್ಲಿ ತುಂಬಲಿವೆ,ಅದೇ ರೀತಿಯಾಗಿ ತುಮಕೂರು-ರಾಯದುರ್ಗ-ಬಳ್ಳಾರಿ ರೈಲ್ವೇ ಮಾರ್ಗವು ಹಳ್ಳ ಹಿಡಿದಿದೆ, ಯಪಿಎ ಸರ್ಕಾರದಲ್ಲಿ ತಂದಂತಹ ಈ ಯೋಜನೆ ಅರ್ಧಕ್ಕೆ ನಿಂತಿರುವುದು ದುರದುಷ್ಠಕರ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಆದರೆ ಯೋಜನೆ ಮಾತ್ರ ಸಕಾರಗೊಂಡಿಲ್ಲ ನೆರೆಯ ಆಂದ್ರಪ್ರದೇಶದಲ್ಲಿ ಈ ಯೋಜನೆ ಅಂತಿಮ ಘಟ್ಟಕ್ಕೆ ಬಂದಿದೆ ಈ ಕೂಡಲೇ ರಾಜ್ಯದ ಮುಖ್ಯಂತ್ರಿಗಳು ಇದರ ಬಗ್ಗೆ ಒತ್ತು ನೀಡಿ ಹೆಚ್ಚಿನ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಜಾತ, ಸದಸ್ಯರಾದ ನಾಗರಾಜು, ಅಂಜನಪ್ಪ, ಆನಂದ್, ರಾಜು ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್. ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಅಶ್ವಥ್ ನಾರಾಯಣ,ಮಾಜಿ ಅಧ್ಯಕ್ಷ ಗಂಗಾಧರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಹನುಮಂತರಾಯಪ್ಪ, ನ್ಯಾತೇಗೌಡ, ನಜೀರ್, ಸುರೇಶ್ ಸೇರಿದಂತೆ ಹಲವು ಸ್ಥಳೀಯ ಮುಖಂಡರುಗಳು ಹಾಜರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಅಗ್ರಹಾರ ಗ್ರಾ.ಪಂ.ಅಧ್ಯಕ್ಷ ಸಿ.ಡಿ.ಪ್ರಭಾಕರ್ ಅಧ್ಯಕ್ಷತೆಯಲ್ಲಿ ವಿಶೇಷ ಚೇತನರ ಸಭೆ

    January 30, 2026

    ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ತಪ್ಪಲಿದೆ ಅನಾಹುತ: ಪಿಎಸ್‌ ಐ ತೀರ್ಥೇಶ್

    January 28, 2026

    ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್

    January 21, 2026

    Leave A Reply Cancel Reply

    Our Picks

    ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು

    January 28, 2026

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    77ನೇ ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

    January 26, 2026

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಆಸ್ತಿ ದಾಖಲೆ ತಿದ್ದುಪಡಿ ಇನ್ಮುಂದೆ ಸುಲಭ!:  ಮನೆ ಬಾಗಿಲಲ್ಲೇ ನಡೆಯಲಿದೆ ‘ಇ–ಪೌತಿ’ ಕಾರ್ಯ

    January 30, 2026

    ಬೆಂಗಳೂರು: ರಾಜ್ಯದ ರೈತರಿಗೆ ಹಾಗೂ ಭೂ ಮಾಲೀಕರಿಗೆ ಕಂದಾಯ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಜಮೀನಿನ ಮೂಲ ಮಾಲೀಕರು ಮೃತಪಟ್ಟ…

    ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌’ಪೆಕ್ಟರ್; ಮೈದಾನದಲ್ಲೇ ಹೈಡ್ರಾಮಾ!

    January 30, 2026

    ಅಗ್ರಹಾರ ಗ್ರಾ.ಪಂ.ಅಧ್ಯಕ್ಷ ಸಿ.ಡಿ.ಪ್ರಭಾಕರ್ ಅಧ್ಯಕ್ಷತೆಯಲ್ಲಿ ವಿಶೇಷ ಚೇತನರ ಸಭೆ

    January 30, 2026

    ಲಕ್ಕುಂಡಿ ಉತ್ಖನನ ವೇಳೆ ಪತ್ತೆಯಾಯ್ತು ಜೀವಂತ ಹಾವು: ‘ನಿಧಿ’ ಇರುವ ಸೂಚನೆ ಎಂದು ಗ್ರಾಮಸ್ಥರಲ್ಲಿ ಕುತೂಹಲ!

    January 30, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.