ತುರುವೇಕೆರೆ: ಜೆಡಿಎಸ್ ಪಕ್ಷದವರು ನಾನು ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಾಗ ಪ್ರಚಾರ ಭಾಷಣದಲ್ಲಿ ಮಾತನಾಡಿದ ತುಣುಕುಗಳನ್ನ ಕಟ್ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ, ನಾನು ಯಾವ ಪಕ್ಷದೊಂದಿಗೂ ಶಾಮಿಲಾಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಬಿಎಂಎಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕಾಗಿ ಎರಡನೇ ಬಾರಿ ಆಗಮಿಸಿದ ನಮ್ಮ ರಾಷ್ಟ್ರೀಯ ನಾಯಕರ ರಾಹುಲ್ ಗಾಂಧಿಯವರಿಗೆ ವಿಶೇಷವಾದ ಕೃತಜ್ಞತೆಗಳು. ನಮ್ಮ ರಾಷ್ಟ್ರೀಯ ನಾಯಕರು ತುರುವೇಕೆರೆಗೆ ಬಂದಾಗ, ನೂಕು ನುಗ್ಗಲಲ್ಲಿ ರಾಹುಲ್ ಗಾಂಧಿಯವರ ನೋಡಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈ ಬಾರಿಯ ಚುನಾವಣಾ ಪ್ರಚಾರಕ್ಕಾಗಿ ಬರಲೇಬೇಕು ಎಂದು ನಮ್ಮ ರಾಜ್ಯದ ನಾಯಕರುಗಳ ಜೊತೆ ಸಭೆಯಲ್ಲಿ ಚರ್ಚಿಸಿದ್ದೆವು. ಹಾಗೆಯೇ ಕ್ಷೇತ್ರಕ್ಕೆ ಬಂದು ಪ್ರಚಾರ ಕಾರ್ಯವನ್ನು ಮುಗಿಸಿ ಹೋಗಿದ್ದಾರೆ ಮತ್ತೊಮ್ಮೆ ಅವರಿಗೆ ಧನ್ಯವಾದಗಳು ಎಂದರು.
ದಯಮಾಡಿ ನನ್ನ ಕ್ರಮ ಸಂಖ್ಯೆ 1 ಬಿ.ಎಂ.ಎಲ್.ಕಾಂತರಾಜು ನನ್ನ ಗುರುತು ಹಸ್ತ, ಈ ಹಸ್ತದ ಗುರುತಿಗೆ ಮತವನ್ನು ನೀಡಿ ಗೆಲುವು ತಂದುಕೊಡುವಂತೆ ಇದೇ ವೇಳೆ ಮತದಾರರಿಗೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ನಾಗೇಶ್, ಮುಖಂಡರುಗಳಾದ ನಂಜುಂಡಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗೋಣಿ ತುಮಕೂರು ಕಾಂತರಾಜು, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೊಡಗಿಹಳ್ಳಿ ಹನುಮಂತಯ್ಯ , ಮಾ.ನ.ಗುರುದತ್. ಕುಮಾರ್, ತ್ರೈಲೋಕ್ಯನಾಥ್, ಮಂಜುನಾಥ್, ರಾಯಸಂದ್ರ ಕುಮಾರ್, ಮಾಳೆ ಕೃಷ್ಣಪ್ಪ, ಕೊಂಡಜ್ಜಿ ಪುಟ್ಟರಾಜು (ಜವರಪ್ಪ) ಮುಂತಾದವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


