ತುಮಕೂರು: ಡಿ ಎಸ್ ಎಸ್ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿಯನ್ನು ಹತ್ಯೆ ಮಾಡಿದ 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾದ್ ತಿಳಿಸಿದರು.
ಎಸ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನರಸಿಂಹಮೂರ್ತಿ ಹತ್ಯಾರೋಪಿಗಳ ಬಂಧನ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 13 ಮಂದಿ ಆರೋಪಿಗಳನ್ನು ಕನಕಪುರದ ಹಾರೋಹಳ್ಳಿ ಸಮೀಪ ಫಾರಂ ಹೌಸ್ ನಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.
ಕಿರಣ್, ಕ್ಯಾಟ್ ರಾಜ, ಮಂಜು, ಅಭಿಷೇಕ್, ನಯಾಜ್, ವೆಂಕಟೇಶ, ಕೀರ್ತಿ, ಚಂದ್ರಶೇಖರ್, ಭರತ್, ಧೀರಜ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. 7 ದಿನ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತೇವೆ ಎಂದರು.
ಜೂನ್ 15 ರಂದು ನರಸಿಂಹಮೂರ್ತಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 7 ಮಂದಿ ಆರೋಪಿಗಳು ಹತ್ಯೆ ನಡೆಸಿದ್ದರೆ, 6 ಜನ ಆರೋಪಿಗಳು ಹತ್ಯೆಗೆ ಸಹಕರಿಸಿದ್ದರು ಎಂದು ಅವರು ತಿಳಿಸಿದರು.
ಭೂ ವಿವಾದ ಹಾಗೂ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆಸಿದ್ದಾರೆನ್ನಲಾಗಿದೆ. ಹತ್ಯೆಯಾಗಿರುವ ಕಿರಣ್ ಮತ್ತು ನರಸಿಂಹ ಮೂರ್ತಿ ಕಳೆದ ಎರಡು ವರ್ಷಗಳಿಂದ ಪರಿಚಯಸ್ಥರಾಗಿದ್ದರು. ಇತ್ತೀಚೆಗೆ ಇವರ ನಡುವೆ ಒಡಕು ಮೂಡಿದ್ದು, ದ್ವೇಷ ಸೃಷ್ಟಿಯಾಗಿತ್ತು ಎಂದು ರಾಹುಲ್ ಕುಮಾರ್ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz