ಪಾವಗಡ: ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ನರಸಿಂಹಮೂರ್ತಿ (ಸಣ್ಣಪ್ಪ)ರವರು ಆಯ್ಕೆಯಾಗಿದ್ದಾರೆ.
ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ರವರು ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನವು ತೆರವುಗೊಂಡಿತ್ತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದು ಅದರಲ್ಲಿ ಜೆಡಿಎಸ್ ಬೆಂಬಲಿತ 11 ಕಾಂಗ್ರೆಸ್ ಬೆಂಬಲಿತ ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರು ಇಂದು ನಡೆದ ಚುನಾವಣೆಯಲ್ಲಿ ಒಟ್ಟು 15 ಜನ ಸದಸ್ಯರ ಭಾಗವಹಿಸಿದ್ದು ಭಾಗವಹಿಸಿದ್ದು ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ್ ಅವರಿಗೆ ಮೂರು ಮತಗಳ ಲಭಿಸಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನರಸಿಂಹಮೂರ್ತಿ (ಸಣ್ಣಪ್ಪ) ಅವರಿಗೆ 12 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಜಯಶೀಲರಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಮ್. ತಿಮ್ಮರಾಯಪ್ಪ ಮಾತನಾಡಿ, ನಿರೀಕ್ಷೆ ಅಂತೆ ನಮ್ಮ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದು, ನಮ್ಮ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರು ಗ್ರಾಮ ಪಂಚಾಯಿತಿಯಲ್ಲಿ ಜನರಿಗೆ ಉತ್ತಮ ಆಡಳಿತ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷರಾದ ಎನ್.ಎ.ಈರಣ್ಣ, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಮಹೇಶ್, ಮಾಜಿ ಅಧ್ಯಕ್ಷರಾದ ಆದಿ ಲಕ್ಷ್ಮೀನರಸಿಂಹ ನಾಯಕ, ಚಂದ್ರಶೇಖರ್, ಓಬಮ್ಮ, ಸದಸ್ಯರಾದ ಮಹೇಶ್, ಸಂಜು ರೆಡ್ಡಿ, ಶ್ರೀನಿವಾಸ್ ನಾಯಕ, ಅಲ್ಕೋರಮ್ಮ, ಪ್ರಮೀಳಮ್ಮ, ನರಸಿಂಹಮೂರ್ತಿ ಹಾಗೂ ಮುಖಂಡರಾದ ಭಾಸ್ಕರ್ ನಾಯಕ, ಪಾಳೇಗರ್ ಲೋಕೇಶ್, ದಾಸಪ್ಪ, ನಾಗಣ್ಣ, ಚಂದ್ರಣ್ಣ ಮುಂತಾದವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx