ತಮಿಳುನಾಡು:ಇದೀಗ ಡಿಎಂಕೆ ಸದಸ್ಯ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿರುವ ಘಟನೆ ತಮಿಳಿನಾಡಿನಲ್ಲಿ ನಡೆದಿದೆ.
ಡಿಎಂಕೆ ನಾಯಕರೊಬ್ಬರು ಆಡಿದ ಮಾತು ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಅದೇನೆಂದರೆ ಚೆನ್ನೈನಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಮೋದಿ ಮತ್ತೊಮ್ಮೆ ಪ್ರದಾನಿಯಾದರೆ ಮಾಂಸ ಪ್ರಿಯರಿಗೆ ಆಘಾತ ಉಂಟಾಗುತ್ತದೆ. ಯಾಕೆಂದರೆ ಆಗ ನೀವು ಮೊಸರನ್ನ, ಸಾಂಬಾರ್ ಮಾತ್ರವೇ ತಿನ್ನಬಹುದು. ಯಾಕೆಂದರೆ ಮಟನ್, ಚಿಕನ್, ಗೋಮಾಂಸ ಹಾಗೂ ಇತರ ಮಾಂಸವನ್ನು ಬ್ಯಾನ್ ಮಾಡಲಾಗುತ್ತದೆ ಎಂದು ಸುಖಾಸುಮ್ಮನೆ ಅಪಪ್ರಚಾರ ಮಾಡಿದ್ದಾರೆ.
ಸದ್ಯ ನಾಯಕರ ಈ ಹೇಳಿಕೆಗೆ ಬಿಜೆಪಿಯವರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಂಕೆ ನಾಯಕನ ಹೇಳಿಕೆಯನ್ನು ಖಂಡಿಸಿದೆ. ತಮಿಳುನಾಡಿನಲ್ಲೀಗ ಕಚ್ಚಾತೀವು ದ್ವೀಪ ವಿವಾದದ ಕಿಡಿ ಹೊತ್ತಿ ಉರಿಯುವಾಗಲೇ ಈ ರೀತಿ ಹೇಳಿಕೆ ಮತ್ತೆ ಇನ್ನಷ್ಟು ಸದ್ದು ಮಾಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA