ನವದೆಹಲಿ: ಮಕ್ಕಳ ಜನನ ಪ್ರಮಾಣದ ಜೊತೆಗೆ ಆಧಾರ್ ಕಾರ್ಡ್ ಕೂಡ ನೀಡಲು ಮುಂದಾಗಿದ್ದು, ಈಗಾಗಲೇ 16 ರಾಜ್ಯಗಳಲ್ಲಿ ನವಜಾತ ಶಿಶುಗಳ ಜನನ ಪ್ರಮಾಣದ ಜೊತೆಗೇ ಆಧಾರ್ ಕಾರ್ಡ್ ನೀಡಲಾಗುತ್ತಿದ್ದು, ಶೀಘ್ರವೇ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ಬರಲಿದೆ.
ಈಗಾಗಲೇ ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಜನನ ಪ್ರಮಾಣ ಪತ್ರಕ್ಕೆ ಆಧಾರ್ ಅನ್ನು ಲಿಂಕ್ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಮಗುವಿನ ಜನನ ಪ್ರಮಾಣ ಪತ್ರ ವಿತರಣೆಯಾದ ಕೂಡಲೇ ಮಗುವಿನ ಹೆಸರಿನಲ್ಲಿ ಹೊಸ ಗುರುತಿನ ಸಂಖ್ಯೆ ನೋಂದಣಿಯಾಗಲಿದ್ದು, ಬಳಿಕ ಮಗುವಿನ ವಿಳಾಸವು ರವಾನೆ ಆದ ಕೂಡಲೇ ಆಧಾರ್ ಸಂಖ್ಯೆ ಸೃಷ್ಟಿಯಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz