ತುಮಕೂರು: ನವೋದಯ ಶಾಲೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಮತ್ತು ನವೋದಯ, ಸೈನಿಕ್, ಆದರ್ಶ, ಮೊರಾರ್ಜಿ, ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ ಇನ್ನಿತರ ಸರ್ಕಾರಿ, ಖಾಸಗಿ ವಸತಿ ಶಾಲೆಗಳಲ್ಲಿ ಮುಂದಿನ ವರ್ಷಗಳಲ್ಲಿ ಪ್ರವೇಶ ಬಯಸಿರುವ 1ರಿಂದ 5ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ಬಿಂದು ಸಂಸ್ಥೆ ಮಾಕ್ ಪರೀಕ್ಷೆ ಆಯೋಜಿಸಿದೆ.
ಮುಖ್ಯ ಪರೀಕ್ಷೆಯ ರೂಪುರೇಷೆಗಳನ್ನು ತಿಳಿಸಿಕೊಡಲು ನವೋದಯ ಪರೀಕ್ಷೆ ಮಾದರಿಯಲ್ಲಿ ಅಣಕು ಪರೀಕ್ಷೆ ನಡೆಯಲಿದೆ. ಪ್ರವೇಶಾಕಾಂಕ್ಷಿಗಳ ಪರೀಕ್ಷಾ ತಯಾರಿ, ಕಲಿಕಾ ಸಾಮರ್ಥ್ಯಗಳ ಸ್ವಯಂ ಮೌಲ್ಯಮಾಪನ, ಪರೀಕ್ಷೆಯ ಸಂಪೂರ್ಣ ಮಾಹಿತಿಗೆ ಮಾಕ್ ಪರೀಕ್ಷೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರದ ನವೋದಯ ವಿದ್ಯಾಲಯ ಸಮಿತಿ ರೂಪಿತ ಅಂಕಗಣಿತ, ಬುದ್ಧಿ ಸಾಮರ್ಥ್ಯ ಪರೀಕ್ಷೆ, ಭಾಷೆ ಕುರಿತು 100 ಅಂಕಗಳಿಗೆ ನವೆಂಬರ್ 16ರಂದು ಭಾನುವಾರ ಬೆಳಿಗ್ಗೆ 9.30ರಿಂದ 11.30ರವರೆಗೆ ವಿಜ್ಞಾನ ಬಿಂದು ಕಚೇರಿಯಲ್ಲಿ ಮಾಕ್ ಪರೀಕ್ಷೆ ನಡೆಯಲಿದೆ. ನವೆಂಬರ್ 12ರ ಒಳಗೆ ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆ, ಕಲಿಕಾ ಮಾಧ್ಯಮ ವಿವರಗಳೊಂದಿಗೆ 8660587150 ವಾಟ್ಸಾಪ್ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಬಹುದು.
‘ಪರೀಕ್ಷೆಗೆ ನಡೆಸಬೇಕಾದ ಸಿದ್ಧತೆ, ಅನುಸರಿಸಬೇಕಾದ ಅಭ್ಯಾಸ ಕ್ರಮ, ಅಳವಡಿಸಿಕೊಳ್ಳಬೇಕಿರುವ ಕಲಿಕಾ ಕೌಶಲ್ಯಗಳು, ಪ್ರಶ್ನೆಗಳಿಗೆ ಉತ್ತರಿಸಲು ಪಾಲಿಸಬೇಕಾದ ತಂತ್ರಗಾರಿಕೆ, ಸಮಯ ನಿರ್ವಹಣೆ ಬಗ್ಗೆ ತರಬೇತಿ, ಮಾರ್ಗದರ್ಶನದೊಂದಿಗೆ ಮಾದರಿ ಕಲಿಕಾ ಸಾಮಗ್ರಿ ನೀಡಲಾಗುವುದು. ಮಾಹಿತಿಗೆ ವಿಜ್ಞಾನ ಬಿಂದು ಸಂಸ್ಥೆ, ಡಿಡಿಪಿಐ ಕಚೇರಿ ಫೈಓವರ್ ಬಳಿ, ಉಪ್ಪಾರಹಳ್ಳಿ ತುಮಕೂರು ಅಥವಾ ಮೇಲಿನ ಸಂಖ್ಯೆಯಲ್ಲಿ ಎಸ್.ರವಿಶಂಕರ್ ಅವರನ್ನು ಸಂಪರ್ಕಿಸಲು ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


