ತುಮಕೂರು: ವಿಜ್ಞಾನ ಬಿಂದು, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಮ್ಯಾಥ್ ಲ್ಯಾಬ್ ಸಹಯೋಗದಲ್ಲಿ ವಿಜ್ಞಾನ–ಗಣಿತ ಒಲಂಪಿಯಾಡ್, ಮಕ್ಕಳ ಕ್ರಿಯಾತ್ಮಕ–ಸ್ಪರ್ಧಾತ್ಮಕ ಕಲಿಕಾ ಸಾಮರ್ಥ್ಯ, ಅವಶ್ಯಕತೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಕ್ಕಳು ಬೇಸಿಗೆ ರಜೆ ಸದುಪಯೋಗ ಪಡಿಸಿಕೊಳ್ಳಲು ಏಪ್ರಿಲ್ 1ರಿಂದ ಮೇ 30ರವರೆಗೆ ಪ್ರತಿದಿನ ಸಂಜೆ 4ರಿಂದ 8ಗಂಟೆವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ.
ಶಾಲೆಯಲ್ಲಿ ಕಷ್ಟ ಅನಿಸುವ ಗಣಿತ, ವಿಜ್ಞಾನ, ಭಾಷೆ, ಸಮಾಜ ವಿಜ್ಞಾನ ವಿಷಯಗಳನ್ನು ಸರಳ–ಸುಲಭ–ಪ್ರಾಯೋಗಿಕವಾಗಿ ಕಲಿಸಿ, ನೈಜ ತರಗತಿಗಿಂತ 2-3 ವರ್ಷ ಮುಂದಿನ ಕಲಿಕೆಯಲ್ಲಿ ಪರಿಣತಿ ಉಂಟು ಮಾಡಲಾಗುವುದು. ಕಲಿಕೆಯನ್ನು ತರಗತಿ–ಪಠ್ಯ–ಪರೀಕ್ಷೆ–ಅಂಕಗಳಿಗೆ ಸೀಮಿತ ಮಾಡದೇ ನಿತ್ಯದ ಬದುಕಿನಲ್ಲಿ ಸಮೀಕರಿಸಲು ತರಬೇತಿ ನೀಡಲಾಗುವುದು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯುಗದಲ್ಲಿ ಬದುಕಬೇಕಿರುವ ಪೀಳಿಗೆಯಲ್ಲಿ ಗಣಿತ, ಭಾಷಾ ಸಂವಹನ, ಜೀವನ ಕೌಶಲ್ಯಗಳನ್ನು ಪರಿಚಯಿಸಲಾಗುವುದು. ಕನ್ನಡ/ಆಂಗ್ಲ ಮಾಧ್ಯಮದ ರಾಜ್ಯ/ಸಿಬಿಎಸ್ ಇ/ಐಸಿಎಸ್ ಇ ಪಠ್ಯಕ್ರಮ ಓದುತ್ತಿರುವ 2ರಿಂದ 10ನೇ ತರಗತಿ ವಿದ್ಯಾರ್ಥಿಗಳು ಆಸಕ್ತಿಯ ವಿಷಯಗಳಲ್ಲಿ ತರಬೇತಿ ಪಡೆಯಬಹುದು.
2026–27ನೇ ಸಾಲಿನ ನವೋದಯ-ಸೈನಿಕ ಶಾಲೆಗಳಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ಹಂತದವರೆಗೆ ಗುಣಾತ್ಮಕ ಶಿಕ್ಷಣ ಪಡೆಯಲು ಇಚ್ಛಿಸುವ 5ನೇ ತರಗತಿಗೆ ದಾಖಲಾಗಬೇಕಿರುವವರಿಗೆ ವಿಶೇಷ ತರಬೇತಿ ಆಯೋಜಿಸಿದೆ. 2, 3, 4ನೇ ತರಗತಿ ವಿದ್ಯಾರ್ಥಿಗಳೂ ಭಾಗವಹಿಸಬಹುದು. ಆಸಕ್ತರು ವಿಜ್ಞಾನ ಬಿಂದು ಕಚೇರಿ, ಡಿಡಿಪಿಐ ಫ್ಲೈ ಓವರ್ ಹತ್ತಿರ ಉಪ್ಪಾರಹಳ್ಳಿ, ತುಮಕೂರು ಅಥವಾ 8660587150ರಲ್ಲಿ ಚನ್ಮಯಿ ಸ್ವಾಮಿ ಅವರನ್ನು ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


