ಬೆಂಗಳೂರು: ನಮ್ಮ ಸಂಘಟನೆಯ ಮೂಲವನ್ನು ಪ್ರಶ್ನಿಸುವ ಮಾನ್ಯ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಮೂಲ ಯಾವುದು ಎಂದು ಸ್ವಲ್ಪ ಬಿಡಿಸಿ ಹೇಳಿದರೆ ಅಸಲಿ ಕಥೆ ದೇಶದ ಜನತೆಗೆ ಗೊತ್ತಾಗುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ಸಂಘಟನೆಯ ಮೂಲವನ್ನು ಪ್ರಶ್ನಿಸುವ ಮಾನ್ಯ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಮೂಲ ಯಾವುದು ಎಂದು ಸ್ವಲ್ಪ ಬಿಡಿಸಿ ಹೇಳಿದರೆ ಅಸಲಿ ಕಥೆ ದೇಶದ ಜನತೆಗೆ ಗೊತ್ತಾಗುತ್ತೆ. ಇಲ್ಲದಿದ್ದರೆ ನಾವು ಬಿಚ್ಚಿಡಬೇಕಾಗುತ್ತದೆ ಎಂದರು.
ಆರ್.ಎಸ್.ಎಸ್ ಈ ನೆಲದ ಮೂಲ ಅಲ್ಲ ಎಂದು ನಮಗೆ ನಿಮ್ಮಿಂದಾಗಲೀ ಇಲ್ಲವೇ ನಕಲಿ ಕಾಂಗ್ರೆಸ್ ಪಕ್ಷದಿಂದ ಪ್ರಮಾಣಪತ್ರ ಬೇಕಾಗಿಲ್ಲ. ನಮ್ಮ ಸಂಘಟನೆಯ ಹಿನ್ನಲೆ ಏನೆಂಬುದು ಶತಕೋಟಿ ಭಾರತೀಯರಿಗೆ ಗೊತ್ತಿರವಾಗ ನಿಮ್ಮಿಂದ ಇಂತಹ ಟೀಕೆ ಅನಿರೀಕ್ಷಿತವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರೆಸ್ಸೆಸ್ ಈ ನೆಲದ ಮೂಲದಿಂದಲೇ ಬೆಳೆದು ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ನೀವು ಟೀಕೆ ಮಾಡಿದಷ್ಟು ಎತ್ತರಕ್ಕೆ ಬೆಳೆಯುತ್ತದೆ . ನಮ್ಮ ಪರಿವಾರದಲ್ಲಿ ಹೊಸ ತಲೆಮಾರಿನ ನಾಯಕರನ್ನು ಬೆಳೆಸುತ್ತಲೇ ಬಂದಿದ್ದಾರೆ. ಎರಡು ದಶಕಗಳಿಂದ ಒಂದೇ ಪರಿವಾರದ ಕಪಿಮುಷ್ಟಿಯಲ್ಲಿರುವ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಹಿಡಿಯುವ “ಸ್ವದೇಶಿ “ಯಾರೊಬ್ಬರೂ ಇಲ್ಲವೇ?’ ಎಂದು ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


