nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Facebook Twitter Instagram
    ಟ್ರೆಂಡಿಂಗ್
    • ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!
    •  CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?
    • ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ
    • ಗೋಮಾಳ ಜಮೀನು ಅತಿಕ್ರಮಣ ಯತ್ನಕ್ಕೆ ಬಂಟರತಳಾಲು ಗ್ರಾಮಸ್ಥರ ತಡೆ: ಸ್ಥಳಕ್ಕೆ ಭೇಟಿ ನೀಡಿ ಕಂದಾಯ ನಿರೀಕ್ಷಕರ ಪರಿಶೀಲನೆ
    • ತುಮಕೂರು ದಸರಾ: ಇಂದು ಏನೇನು ಕಾರ್ಯಕ್ರಮ?
    • ಶ್ರೀ ಕಂಬಾಳು ಸಂಸ್ಥಾನ ಮಠದಲ್ಲಿ ವಿಜಯದಶಮಿ ಮಹೋತ್ಸವ: ಅ.11ರಿಂದ ಧಾರ್ಮಿಕ ಕೈಂಕರ್ಯಗಳು ಆರಂಭ
    • ಗಿಡಗಳಲ್ಲೂ ಗಂಡು, ಹೆಣ್ಣು ಇವೆಯೇ? ಯಾವ ಮರ ಹಣ್ಣು ಬಿಡುತ್ತದೆ, ಹೇಗೆ ಗುರುತಿಸಬೇಕು?
    • ನವರಾತ್ರಿ ಸಂಭ್ರಮ ಆರಂಭ: ದಿನಕ್ಕೊಂದು ಬಣ್ಣಕ್ಕಿರುವ ವಿಶೇಷ ಅರ್ಥವೇನು ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಅಗತ್ಯ ಬಂದೋಬಸ್ತ್ ಸೂಚನೆ | ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಜಿ.ಪರಮೇಶ್ವರ ಸಭೆ
    ರಾಜ್ಯ ಸುದ್ದಿ December 24, 2024

    ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಅಗತ್ಯ ಬಂದೋಬಸ್ತ್ ಸೂಚನೆ | ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಜಿ.ಪರಮೇಶ್ವರ ಸಭೆ

    By adminDecember 24, 2024No Comments2 Mins Read
    parameshwar

    ಬೆಂಗಳೂರು: ನಗರದಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೂಚಿಸಿದರು.

    ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಳೆದ ವರ್ಷ ಅಚ್ಚುಕಟ್ಟಾಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕ್ರಮ ವಹಿಸಲಾಗಿತ್ತು. ಬೆಂಗಳೂರು ವಿಶ್ವದ ಗಮನ ಸೆಳೆಯುವ ನಗರವಾಗಿರುವುದರಿಂದ ಯಾವುದನ್ನು ನಿರ್ಲಕ್ಷಿಸದೇ ,ಅತ್ಯಂತ ಜವಾಬ್ಧಾರಿಯುತವಾಗಿ ಬಂದೋಬಸ್ತ್ ಕೈಗೊಳ್ಳಬೇಕು ಎಂದರು.

    ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಗುಪ್ತದಳ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಬೇಕು ಎಂದು ಹೇಳಿದರು.
    ಅಗತ್ಯ ಬಂದೋಬಸ್ತ್ ಹಿನ್ನಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಜೆ ನೀಡುವುದು ಬೇಡ. ತೀರ ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡಿ. ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ ವೇಳೆ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ಗಳನ್ನೇ ಹೊಣೆ ಮಾಡಲಾಗುವುದು. ಈ ವಿಚಾರದಲ್ಲಿ ಯಾರು ಏನೇ ಹೇಳಿದರು ಕೇಳುವುದಿಲ್ಲ ಎಂದು ಎಚ್ಚರಿಸಿದರು.

    ಬಿಬಿಎಂಪಿ, ಬಿಎಂಟಿಸಿ ಬಿಎಂಆರ್ ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಡ್ರಂಕ್ ಆ್ಯಂಡ್ ಡ್ರೈವ್, ಬೈಕ್ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳು ಹಾಗೂ ಹಳೇ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.

    ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಿಸಿಬಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಚಂದ್ರಗುಪ್ತ ಹಾಗೂ ಎಲ್ಲ ವಿಭಾಗದ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಇದ್ದರು.

    ಏಳು ಲಕ್ಷ ಜನ ಸೇರುವ ಸಾಧ್ಯತೆ:

    ನಗರದಲ್ಲಿ ಹೊಸ ವರ್ಷ ಆಚರಣೆಗೆ 7 ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.

    ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರು ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲಾಗಿದೆ. ಎಲ್ಲರು ಸಂತೋಷದಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಿಸಲು ಸಹಕರಿಸಲಾಗುವುದು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೆಟ್ರೋ ವ್ಯವಸ್ಥೆ, ಓಲಾ, ಊಬರ್ ಮುಂತಾದ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದೆ ಎಂದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    “30 ನಾಯಕರಿಗೆ ಕೋಟಿ ಕೋಟಿ ಕೊಟ್ಟಿದ್ದೇನೆ” ಎಂದ ಪ್ರದೀಪ್ ಈಶ್ವರ್! ಕಾಂಗ್ರೆಸ್‌ ನಲ್ಲಿ ಭಿನ್ನಮತ ಸ್ಫೋಟ

    October 11, 2026

    ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ

    October 10, 2026

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    Comments are closed.

    Our Picks

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

    ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ (75) ಅವರ ನಿಧನಕ್ಕೆ ತೀವ್ರ ಹೃದಯಾಘಾತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯ…

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಗೋಮಾಳ ಜಮೀನು ಅತಿಕ್ರಮಣ ಯತ್ನಕ್ಕೆ ಬಂಟರತಳಾಲು ಗ್ರಾಮಸ್ಥರ ತಡೆ: ಸ್ಥಳಕ್ಕೆ ಭೇಟಿ ನೀಡಿ ಕಂದಾಯ ನಿರೀಕ್ಷಕರ ಪರಿಶೀಲನೆ

    October 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.