ಸರಗೂರು: ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಬೀಚನಹಳ್ಳಿಯಲ್ಲಿ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ, ಕಬಿನಿ, ಕೃಷ್ಣ ಸೇರಿದಂತೆ ಬಹುತೇಕ ಅಂತಾರಾಜ್ಯ ನದಿಗಳ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಅಂತ ನಾನು ರಾಜ್ಯಸಭೆಯಲ್ಲಿ ಕೈಮುಗಿದು ಮನವಿ ಮಾಡಿದೆ. ಯಾವ ಪಕ್ಷದವರೂ ಸಹಕಾರ ಕೊಡಲಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ. ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಬೀಚನಹಳ್ಳಿಯಲ್ಲಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದರು.
ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳೂ ಒಂದಾಗುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಯಾರೂ ಒಂದಾಗಲ್ಲ. ಪಂಚ ರತ್ನ, ಮಹದಾಯಿ ಸಾಕಷ್ಟು ನೋವಿದೆ. ಜಲ ಸಂಪನ್ಮೂಲ ಸಚಿವರು ನನಗೆ ಮೂರು ಬಾರಿ ಅಪಾಯಿಂಟ್ಮೆಂಟ್ ಕೊಟ್ಟರು. ಮನೆಗೆ ಹೋದಾಗ ಚಕ್ಕರ್ ಎಂದು ಅವರು ಹೇಳಿದರು.
ಪರ್ಸೆಂಟೇಜ್ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಸತ್ಯವಂತರು ? ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್ ನವರು ಏನೂ ಮಾಡಿಯೇ ಇಲ್ವೇ ? ಯಾರು ಸಾಚ ಇದ್ದಾರೆ ಹೇಳಿ ? ಕಾಂಗ್ರೆಸ್ ಸರ್ಕಾರ ಇದ್ದಾಗ 10 % ಸರ್ಕಾರ ಅಂತ ಪ್ರಧಾನಿಯೇ ಆರೋಪ ಮಾಡಿದ್ರು. ಆಗಲೂ ನಾನು ಆರೋಪ ಮಾಡಲಿಲ್ಲ. ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದರು.
ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ. ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಗುತ್ತಿಗೆದಾರರ ಸಂಘದಿಂದ ಪರ್ಸೆಂಟೇಜ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ಸಂಬಂಧವಿಲ್ಲ, ನನ್ನ ಮಗ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದಾನಾ?, ನೀರಾವರಿ ಸಚಿವ ಆಗಿದ್ದಾನಾ.?. ನನ್ನ ಮಗ ಸಚಿವ ಆಗಿದ್ರೆ ಮಾತನಾಡುತ್ತಿದ್ದೆ. ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು.? ಎಂದು ನಿರ್ಲಕ್ಷಿಸಿದರು.
ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮಗಳನ್ನು ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ. ನಮ್ಮ ಜತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರ ? ಸುಮ್ನೆ ಯಾರೋ ಏನೋ ಹೇಳ್ತಾರೆ ಹೇಳಲಿ ಬಿಡಿ. ಕಬಿನಿ ಡ್ಯಾಂ ಬಳಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹೇಳಿಕೆ.
ಜಲಧಾರೆ ಕುಮಾರಸ್ವಾಮಿ ಅವರ ಮೆದುಳಿನ ಕೂಸು. ಶಾಸಕರು, ಮುಖಂಡರನ್ನು ಒಗ್ಗೂಡಿಸಿ ಕಾರ್ಯಕ್ರಮ ರೂಪಿಸಿದ್ದಾರೆ. ನಾನೂ ಮೈಸೂರಿನಿಂದ ಯಾತ್ರೆ ಶುರು ಮಾಡಿದ್ದೇನೆ. ಜನರ ಪರವಾಗಿ ನಾನೂ ಕಿಂಚಿತ್ತು ಹೋರಾಟ ಮಾಡುತ್ತಿದ್ದೇನೆ. ಮೇ 8ರವರೆಗೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ನಮ್ಮ ಹಕ್ಕಿಗೆ ಹೋರಾಟ ಮಾಡುವಾಗ ಬೇರೊಬ್ಬರಿಗೆ ನೋವು ಮಾಡಬೇಕು ಅಂತಲ್ಲ. ನೀರಾವರಿ ವಿಚಾರದಲ್ಲಿ ತಮಿಳರು ಮಾಡಿರುವ ಅನ್ಯಾಯವನ್ನು ಮೊದಲ ಭಾಷಣದಲ್ಲೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೆ. ವಾಜಪೇಯಿ, ನರಸಿಂಹರಾವ್, ಮೋದಿ ಕಾಲದಲ್ಲಿ ಏನಾಗಿದೆ ಅಂತ ಎಲ್ಲವನ್ನೂ ಹೇಳಬಲ್ಲೆ. ದುರದೃಷ್ಟವೆಂದರೆ ಯಾರೂ ನಮ್ಮ ಪರವಾಗಿ ಇಲ್ಲ. ವ್ಯವಸಾಯಕ್ಕೆ ಕೊಟ್ಟಿರುವ ನೀರನ್ನೇ ಕುಡಿಯುವ ನೀರಿಗೂ ಬಳಸಿಕೊಳ್ಳಬೇಕಿದೆ. ಇದು ಒಂದು ಜಾತಿ, ಪಕ್ಷದ ಪ್ರಶ್ನೆಯಲ್ಲ. ನಾನು ಎಲ್ಲಿವರೆಗೆ ಬದುಕಿರುತ್ತೇನೋ ಗೊತ್ತಿಲ್ಲ. ಅಧಿಕಾರಕ್ಕಾಗಿ ದೇವೇಗೌಡರು ಹೋರಾಟ ಮಾಡಲ್ಲ. ನನ್ನ ಜೀವಿತಾವಧಿಯಲ್ಲಿ ನನ್ನ ಹೋರಾಟಕ್ಕೆ ಫಲ ಸಿಕ್ಕಿಲ್ಲ ಎನ್ನುವ ನೋವಿದೆ. ಸೇಲಂ ಜಿಲ್ಲೆಯಲ್ಲಿ ಅತ್ಯಂತ ಆಳದಿಂದ ನೀರು ಎತ್ತಿ ಕುಡಿಯುವ ನೀರು ಕೊಡುತ್ತಾರೆ. ಹೀಗೆ ಬಳಸಿಕೊಳ್ಳಲು ಅವಕಾಶ ಇಲ್ಲ. ಆದರೆ ಪ್ರಧಾನಿ ಮೋದಿ ಅವರೇ ಆ ಯೋಜನೆಗೆ ಅನುದಾನ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಎಂಎಲ್ ಎ ಎಂ.ಅಶ್ವಿನ್ ಕುಮಾರ್, ಎಂಎಲ್ ಸಿ ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಟಿ.ಬಿ.ಚಿಕ್ಕಣ್ಣ, ಶರವಣ ಯುವ ನಾಯಕ ಜಯಪ್ರಕಾಶ್ ಸೇರಿ ಸ್ಥಳಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


