ನಂಜನಗೂಡು: ನಗರದ ಕಪಿಲಾ ನದಿಯ ಸ್ನಾನಘಟ್ಟದಲ್ಲಿ ಐದು ತಿಂಗಳ ಗರ್ಭಿಣಿ ಹೆಂಡತಿಯನ್ನು ಗಂಡನೇ ನದಿಗೆ ತಳ್ಳಿ, ಮುಳುಗಿಸಿ ಹತ್ಯೆ ನಡೆದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ ಪೊಲೀಸರು ತಿಳಿಸಿದ್ದಾರೆ.
ತಾಲ್ಲೂಕಿನ ಮುದ್ದಹಳ್ಳಿ ಗ್ರಾಮದ ದೇವಿಕಾ (35) ಮೃತಪಟ್ಟವರು. ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದ ಪುಟ್ಟಸಿದ್ದಯ್ಯನ ಮಗಳಾದ ದೇವಿಕಾ ಅವರನ್ನು ಐದು ವರ್ಷಗಳ ಹಿಂದೆ ಮುದ್ದಹಳ್ಳಿಯ ರಾಜೇಶ್ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ರಾಜೇಶ್ ನದಿಯ ಬಳಿ ಹೆಂಡತಿಯನ್ನು ಕರೆದೊಯ್ದು ನದಿಗೆ ತಳ್ಳಿ, ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದೇವಿಕಾ ತಂದೆ ನೀಡಿರುವ ದೂರಿನನ್ವಯ ಆರೋಪಿ ರಾಜೇಶ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿ.ಪಿ.ಐ ಲಕ್ಷ್ಮೀಕಾಂತ್ ತಳವಾರ್ ತಿಳಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700