ನೀಟ್ ಸ್ನಾತಕೋತರ ಪರೀಕ್ಷೆಯ ದಿನಾಂಕ ಗಳನ್ನು ಮುಂದೂಡಬೇಕೆಂದು ಭಾರತೀಯ ವೈದ್ಯಕೀಯ ಒಕ್ಕೂಟ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರಿಗೆ ಮನವಿ ಮಾಡಿದೆ.
ಈ ತಿಂಗಳ 21ರಂದು ಸ್ನಾತಕೋತರ – 2021ರ ಅಖಿಲ ಭಾರತ ಖೋಟಾ ಕೌನ್ಸಲಿಂಗ್ ತಡವಾ ಗುತ್ತಿರುವ ಕಾರಣ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಮಾಡಿದೆ. ಪಿಜಿ- 2022ರ ಪರೀಕ್ಷೆಯ ದಿನಾಂಕ ಮತ್ತು 2021ರ ಕೌನ್ಸಲಿಂಗ್ ದಿನಾಂಕ ಮತ್ತು 2021ರ ಕೌನ್ಸಲಿಂಗ್ ಮುಗಿಸಬೇಕಿರುವ ದಿನಾಂಕದ ನಡುವೆ ಅಂತರ ಕಡಿಮೆ ಇದೆ. ಆದ್ದರಿಂದ ಇಂತಹ ಕಠಿಣ ಪರೀಕ್ಷೆಗೆ ಸಿದ್ಧತೆ ಅಗತ್ಯವಿದ್ದು, ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಮಯಾವಕಾಶ ಸಿಗುವುದಿಲ್ಲ ಎಂದು ಒಕ್ಕೂಟ ಹೇಳಿದೆ.
ಕೋವಿಡ್ ಕಾರಣದಿಂದಾಗಿ 2021ರ ನೀಟ್ ಪಿಜಿ 5 ತಿಂಗಳು ತಡವಾಗಿ ಆರಂಭವಾಗಿತ್ತು. ಅ.25, 2021ರಂದು ನಡೆಯಬೇಕಿದ್ದ ಕೌನ್ಸಲಿಂಗ್ ಜನವರಿ ತಿಂಗಳಿನಲ್ಲಿ ಆರಂಭವಾಗಿದೆ. ಸೀಟುಗಳ ಮೀಸಲಾತಿ ಘೋಷಣೆ ಬಾಕಿ ಇದ್ದು, ಇದಕ್ಕೆ ಮುಖ್ಯ ಕಾರಣ ಮಾ. 31., 2022ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಕೌನ್ಸಲಿಂಗ್ ಮತ್ತಷ್ಟು ವಿಳಂಬವಾಯಿತು. ಕೊರೊನಾ ಸಂದರ್ಭದಲ್ಲಿ ಕೋವಿಡ್ ವಾರಿಯರ್‌ಗಳಾಗಿ 10 ಸಾವಿರ ಇಂಟರ್ನಿಗಳ ಅಂತಿಮ ಪರೀಕ್ಷೆಗಳು ತಡವಾಗಿದ್ದರಿಂದ ಮತ್ತು ಇಂಟರ್ ಶಿಪ್ ಮಾನದಂಡ ಅರ್ಹತೆಯನ್ನು ವಿಸ್ತರಿಸಿದ ಕಾರಣ ನೀಟ್ ಪಿಜಿ ಪರೀಕ್ಷೆಗೆ ಹಾಜರಾ ಗಲು ಸಾಧ್ಯವಾಗಿರಲಿಲ್ಲ ಎಂದು ಒಕ್ಕೂಟವು ತಿಳಿಸಿದೆ. ಹೀಗಾಗಿ, ನೀಟ್ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿಕೊಂಡಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5