nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ ಇಲ್ಲ: ಸಚಿವ ಕೆ.ಎಚ್‌.ಮುನಿಯಪ್ಪ

    March 17, 2026

    ರಾಷ್ಟ್ರನಾಯಕರ ಜಯಂತಿ ಆಚರಣಾ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು: ಸಭೆಯಿಂದ ಹೊರ ನಡೆದ ಮುಖಂಡರು

    March 16, 2026

    ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

    March 16, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ ಇಲ್ಲ: ಸಚಿವ ಕೆ.ಎಚ್‌.ಮುನಿಯಪ್ಪ
    • ರಾಷ್ಟ್ರನಾಯಕರ ಜಯಂತಿ ಆಚರಣಾ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು: ಸಭೆಯಿಂದ ಹೊರ ನಡೆದ ಮುಖಂಡರು
    • ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್
    • ಶಾಸಕರ ಪ್ರಶ್ನೆಗಳಿಗೆ ಉತ್ತರವಿಲ್ಲ: ‘ಹೀಗಾದರೆ ಸದನ ನಡೆಸುವುದು ಹೇಗೆ?’: ಸದನದಿಂದ ಹೊರನಡೆದ ಸ್ಪೀಕರ್ ಯು.ಟಿ. ಖಾದರ್
    • ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಜಮೀನು ಖರೀದಿ: ಸ್ಮಶಾನ ಭೂಮಿ ಕೊರತೆ ನೀಗಿಸಲು ಸರ್ಕಾರ ಪ್ಲಾನ್
    • ಸರ್ಕಾರಿ ಶಾಲೆಗಳ ವಿಲೀನ: 2022ರಿಂದ ಈವರೆಗೆ 31 ಹೊಸ ಕೆಪಿಎಸ್ ಶಾಲೆಗಳ ಆರಂಭ: ಸಚಿವ ಮಧು ಬಂಗಾರಪ್ಪ
    • ಮಾ.25ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಒಳಮೀಸಲಾತಿ ವರದಿ ವಿರೋಧಿಸಿ ಛಲವಾದಿ ಮಹಾಸಭಾ ಕರೆ
    • ಕೊರಟಗೆರೆ ಪಟ್ಟಣ ಪಂಚಾಯಿತಿ ಈಗ ಪುರಸಭೆ: 15ರಿಂದ 23ಕ್ಕೆ ಏರಿಕೆಯಾದ ವಾರ್ಡ್‌ಗಳ ಸಂಖ್ಯೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನವಜಾತ ಶಿಶು ಸಾವು: ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವತೆಗೆ ಹಿಡಿದ ಕನ್ನಡಿ
    ಲೇಖನ July 28, 2023

    ನವಜಾತ ಶಿಶು ಸಾವು: ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವತೆಗೆ ಹಿಡಿದ ಕನ್ನಡಿ

    By adminJuly 28, 2023No Comments3 Mins Read
    vaddagere nagarajaiah
    • ಡಾ.ವಡ್ಡಗೆರೆ ನಾಗರಾಜಯ್ಯ

    ಕಾಡುಗೊಲ್ಲ ಸಮುದಾಯದ ಪುರಾತನ ಪದ್ದತಿಯ ಪ್ರಕಾರ ಊರಾಚೆ ಪ್ರತ್ಯೇಕವಾದ ತಾತ್ಕಾಲಿಕ ಗುಡಿಸಲಿನಲ್ಲಿ ಬಾಣಂತಿಯೊಬ್ಬಳು ತನ್ನ ನವಜಾತ ಶಿಶುವಿನೊಂದಿಗೆ ವಾಸವಿದ್ದಾಗ ಮಳೆಗೆ ಸಿಕ್ಕಿ ನವಜಾತ ಶಿಶು ಸತ್ತುಹೋಗಿರುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಕಾಡುಗೊಲ್ಲರ ಹಟ್ಟಿಯಲ್ಲಿ ಸಂಭವಿಸಿರುವ ಈ ಘಟನೆ ಕರ್ನಾಟಕ ಮತ್ತು ಕರ್ನಾಟಕದ ಆಚೆಗೂ ನೆಲೆಸಿರುವ ಎಲ್ಲಾ ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವತೆಗೆ ಕನ್ನಡಿ ಹಿಡಿಯುತ್ತದೆ.

    ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ‌ಮೆಟ್ರೋಪಾಲಿಟನ್ ಮಹಾನಗರದ ನಾಗದೇವನಹಳ್ಳಿಯ ಕಾಡುಗೊಲ್ಲರು ಈಗಲೂ ತಮ್ಮ ಹೆಣ್ಣುಮಕ್ಕಳು ಮುಟ್ಟಾದಾಗ‌ ಮತ್ತು ಹೆರಿಗೆಯ ಸಮಯದಲ್ಲಿ ‌ಮೂರು ತಿಂಗಳು ಮನೆಯಾಚೆ ಪ್ರತ್ಯೇಕವಾದ ಗುಡಿಸಲು ಅಥವಾ ಕುಟೀರಗಳಲ್ಲಿರಿಸುವ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.


    Provided by
    Provided by

    ಕರ್ನಾಟಕದ ಅನೇಕ ಕಡೆಗಳಲ್ಲಿ ಕಾಡುಗೊಲ್ಲ ಸಮುದಾಯದ ಬಹುತೇಕ ಜನ ಇಂದಿಗೂ ಕಳ್ಳೆಬೇಲಿಯೊಳಗಿನ ಹಟ್ಡಿಗಳಲ್ಲಿ ಹುಲ್ಲುಗುಡಿಸಲಿನ ಗುಡಿಗಳಲ್ಲಿ ತಮ್ಮದೇ ಸಾಂಸ್ಕೃತಿಕ ನಾಯಕರನ್ನು ದೇವರುಗಳೆಂದು ಆರಾಧಿಸುತ್ತಾ ಹುಲ್ಲುಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.

    ಹೆಣ್ಣುಮಕ್ಕಳನ್ನು ಮುಟ್ಟುಚೆಟ್ಟು, ಬಾಣಂತಿ ಸಮಯಗಳಲ್ಲಿ ಮಡಿಮೈಲಿಗೆ ಸೂತಕವೆಂದು ಮನೆಯಾಚೆ ಪ್ರತ್ಯೇಕವಾಗಿ ಗುಡಿಸಲುಗಳಲ್ಲಿರಿಸುವ ಮೂಢ ಪದ್ದತಿಯನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಮಾದಿಗ ಸಮುದಾಯದ ಜನರನ್ನು ತಮ್ಮ ಹಟ್ಟಿಯೊಳಕ್ಕೆ ಸೇರಿಸದಿರುವ, ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮುಟ್ಟಿಸಿಕೊಳ್ಳದಿರುವ ಮತ್ತು ಹಟ್ಟಿಯೊಳಕ್ಕೆ ಪ್ರವೇಶ ನಿರ್ಬಂಧಿಸುವ, ಹೆಣ್ಣುಮಕ್ಕಳಿಗೆ ದೇವರ ಗುಡಿಗಳ ಪ್ರವೇಶ ಮತ್ತು ಪೂಜಿಸುವ ಧಾರ್ಮಿಕ ಅಧಿಕಾರಗಳ ನಿರಾಕರಣೆ ಇನ್ನೂ ಮುಂತಾದ ಮೌಡ್ಯಾಚರಣೆಗಳ ವಿರುದ್ದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಾವು ಕಳೆದೆರಡು ದಶಕಗಳಿಂದಲೂ ನಡೆಸುತ್ತಾ ಬಂದಿದ್ದೇವೆ.

    ಕೇವಲ ಕಾಡುಗೊಲ್ಲರಷ್ಟೇ ಅಲ್ಲದೇ ಭಾರತದಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯಗಳು ಹೆಣ್ಣುಮಕ್ಕಳ ವಿಷಯದಲ್ಲಿ ಬದಲಾವಣೆಗೆ ಒಪ್ಪದೆ ತೀರಾ ಜಿಗುಟಾಗಿವೆ. ಬಹುಮುಖ್ಯವಾಗಿ ತಾವು ನಂಬಿದ ದೇವರುಗಳಿಗೆ ಅಂಟುಮುಂಟಾಗದಂತೆ ನೋಡಿಕೊಳ್ಳಲು ಮಹಿಳೆಯರನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮುಟ್ಟಿಸಿಕೊಳ್ಳದೇ ದೂರ ಇರಿಸಬೇಕೆಂಬ ನಂಬಿಕೆ ಕಾಡುಗೊಲ್ಲರಲ್ಲಿ ಬಲವಾಗಿ ಬೇರೂರಿದೆ.

    ನಿಜವಾಗಿಯೂ ಇವರು ಆರಾಧಿಸುವ ದೈವಗಳು ಆಯಾ ಸಮುದಾಯಕ್ಕಾಗಿ ದುಡಿದು ಮಡಿದ ಸಾಂಸ್ಕೃತಿಕ ನಾಯಕರೇ ಆಗಿರುತ್ತಾರೆ. ವೈರಿಗಳ ವಿರುದ್ಧ ಕಾದಾಡಿ ತಮ್ಮ ಸಮುದಾಯವನ್ನು, ಪಶು ಸಂಪತ್ತು ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಹಾಗೂ ವಾಸದ ನೆಲೆಗಳನ್ನು ಕಾಪಾಡಿ ರಕ್ಷಿಸಿದ ಆ ನಾಯಕರು ತಮ್ಮ ಬದುಕಿನ ಉಪಯೋಗಕ್ಕೆ ಬಂದವರಾದ್ದರಿಂದಲೇ ಸಹಜವಾಗಿ ದೇವರುಗಳ ಸ್ಥಾನದಲ್ಲಿ ಪ್ರತಿಷ್ಠಾಪಿತರಾಗಿ ಪರಿಸರದ ಘಟಕಗಳೇ ಆಗಿರುತ್ತಾರೆ.

    ಎಲ್ಲಾ ಬುಡಕಟ್ಟು, ಅಲೆಮಾರಿ, ಆದಿವಾಸಿಗಳಲ್ಲಿಯೂ ತಮ್ಮದೇ ಆದ ನಂಬಿಕೆ, ಆಚಾರ ವಿಚಾರ ಸಂಪ್ರದಾಯಗಳು ಅಸ್ತಿತ್ವದಲ್ಲಿವೆ. ಇವೆಲ್ಲವುಗಳಿಗೂ ಆಯಾ ಸಮುದಾಯಗಳು ಕಟ್ಟುನಿಟ್ಟಾದ ನಿಯಮಗಳನ್ನು ಅಳವಡಿಸಿ ಜಾರಿಯಲ್ಲಿಟ್ಟುಕೊಂಡಿವೆ. ಕಾಡುಗೊಲ್ಲರ ಆಚರಣೆಗಳಿಗೂ ಮತ್ತು ಮೇಲ್ವರ್ಗದವರು ಅನುಸರಿಸುತ್ತಿರುವ ಶ್ರೇಣೀಕೃತ ಜಾತಿವ್ಯವಸ್ಥೆಗೂ ನೇರವಾಗಿ ಯಾವುದೇ ಸಂಬಂಧವಿದ್ದಂತೆ ಕಾಣಿಸುವುದಿಲ್ಲ. ಯಾಕೆಂದರೆ ಮೇಲ್ವರ್ಗದ ಮುಖ್ಯವಾಹಿನಿ ಸಮಾಜದಿಂದ ದೂರವೇ ಉಳಿದಿರುವ ಕಾಡುಗೊಲ್ಲರು ಇಂದಿಗೂ ಹಟ್ಟಿ ಎಂದು ಕರೆಯಲಾಗುವ ತಮ್ಮದೇ ಪ್ರತ್ಯೇಕ ಬೌಗೋಳಿಕ ನೆಲೆಗಳಲ್ಲಿ ವಾಸಿಸುತ್ತಿದ್ದಾರೆ. ಸಂಪ್ರದಾಯ, ನಂಬಿಕೆ, ಆಚರಣೆಗಳು ತಮ್ಮ ಸಾಮಾಜಿಕ ಆಸ್ಮಿತೆಯ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಗುರುತಿಸುವುದರ ಅನನ್ಯ ಲಕ್ಷಣಗಳೆಂದೇ ಪರಿಗಣಿಸಿದ್ದಾರೆ.  ಇಂತಹ ನಡವಳಿಕೆಗಳು ಆದಿಮ ಸ್ಥಿತಿಯಲ್ಲಿರುವ ಸಮುದಾಯಗಳಲ್ಲಿ ಪ್ರಶ್ನಾತೀತ ಸಂಗತಿಗಳೆಂದೇ ಪಾಲನೆಯಲ್ಲಿವೆ.

    “ಅಂಬೇಡ್ಕರ್ ಅವರ ಸಂವಿಧಾನದ ಕಾನೂನುಗಳು ಇಂತಹ ಆಚರಣೆಗಳನ್ನು ಒಪ್ಪಲಾರವು. ಇವೆಲ್ಲವೂ ಕಾನೂನು ಬಾಹಿರ” ಎಂದು ಯಾರಾದರೂ ಕೇಳಿದರೆ, “ನಿಮ್ಮ ಅಂಬೇಡ್ಕರ್ ಬಂದಿದ್ದಾಗಲೀ ಸಂವಿಧಾನ ಬರೆದದ್ದಾಗಲೀ ನಿನ್ನೆಮೊನ್ನೆ. ನಮ್ಮ ಕುಲಾಚಾರ ಸಂಪ್ರದಾಯಗಳು ಸಾವಿರಾರು ವರ್ಷಗಳಿಂದಲೂ ಬಂದಿವೆ. ಆಗೆಲ್ಲಾ ನಿಮ್ಮ ಅಂಬೇಡ್ಕರ್ರೇ ಇದ್ರಾ… ಅವರ ಕಾನೂನೇ ಇತ್ತಾ ? ಹೋಗಯ್ಯ ಕಂಡಿದ್ದೀವಿ” ಎಂದು ಎದುರುಬಿದ್ದು ಪ್ರಶ್ನಿಸುವ ಮಟ್ಟಿಗೆ ಇಂದಿಗೂ ಅಜ್ಞಾನದಲ್ಲಿದ್ದಾರೆ.

    ಮಾದಿಗರನ್ನು ತಮ್ಮ ಹಟ್ಟಿಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿರುವ ಕಾಡುಗೊಲ್ಲರು, ತಮ್ಮದೇ ಸಮುದಾಯದ ಪುರುಷರನ್ನು ಹೊರತುಪಡಿಸಿ ಬೇರೆ ಯಾವುದೇ ಸಮುದಾಯದವರನ್ನೂ ತಮ್ಮ ದೈವಸ್ಥಾನಗಳಿಗೆ ಸೇರಿಸುವುದಿಲ್ಲ. ತಮ್ಮ ‌ಕುಲದಾಚೆಯ ಬ್ರಾಹ್ಮಣನಾದರೂ ಸರಿಯೇ ಗುಡಿಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಇದು ಇನ್ನೊಬ್ಬರನ್ನು ಅವಮಾನಿಸುವ ಬದಲಾಗಿ ತಮ್ಮ‌ ಬುಡಕಟ್ಟುತನ, ಸಾಮಾಜಿಕ ಆಸ್ಮಿತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ಹಕ್ಕು ಎಂದೇ ಕಾಡುಗೊಲ್ಲರು ಭಾವಿಸಿದ್ದಾರೆ.

    ಇಂತಹ ವಿಚಾರಗಳಲ್ಲಿ ಜಾಗೃತಿ ಮೂಡಿಸಲು ಕಾಡುಗೊಲ್ಲರ ಹಟ್ಟಿಗಳಲ್ಲಿ ಸರ್ಕಾರ ಅರಿವಿನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ. ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಭಿವೃದ್ದಿ ಪಡಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಶಿಕ್ಷಣಕ್ಕೆ ಸುಸಜ್ಜಿತ ಶಾಲೆ, ವೈಜ್ಞಾನಿಕ ಮನೋಧರ್ಮ ರೂಪಿಸುವ ಹೊಸ ಪಠ್ಯಗಳು, ಆರೋಗ್ಯ ಸೌಲಭ್ಯ, ಸಂವಿಧಾನ ಮತ್ತು ಕಾನೂನುಗಳ ಸಾಕ್ಷರತೆ, ಆರ್ಥಿಕ ಸಬಲೀಕರಣದ ಯೋಜನೆಗಳು, ರಾಜಕೀಯ ಪ್ರಾತಿನಿಧ್ಯ, ಸರ್ಕಾರ ಮತ್ತಿತರ ಸಾರ್ವಜನಿಕ ವಲಯಗಳ ನೌಕರಿ ಇನ್ನೂ ಮುಂತಾದ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಇಂತಹ ಸಮುದಾಯಗಳ ಸುಧಾರಣೆ ಸಾಧ್ಯವಾಗುತ್ತದೆ. ಇದರ ಹೊರತು ಕಾಡುಗೊಲ್ಲರ ಅಥವಾ ಯಾವುದೇ ಬುಡಕಟ್ಟು ಸಮುದಾಯದ ಆಚಾರ ವಿಚಾರ ಸಂಪ್ರದಾಯಗಳನ್ನು ದುರಂತವೆಂಬಂತೆ ಬಿಂಬಿಸುವುದು ಅವರ ಸಾಂಸ್ಕೃತಿಕ ಬದುಕಿನ ಅಸ್ಮಿತೆಗಳನ್ನು ದಿಕ್ಕು ತಪ್ಪಿಸಿದಂತಾಗುತ್ತದೆ. ಬದಲಾವಣೆ ಎಂಬುದು ನಿಧಾನ ಗತಿಯ ನಿರಂತರ ಪ್ರಕ್ರಿಯೆ ಎಂಬುದನ್ನು ಮನಗಾಣೋಣ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಮಹಿಳೆಯರ ಶಕ್ತಿ– ಸಮಾಜದ ಪ್ರಗತಿಯ ನಿಜವಾದ ಅಡಿಪಾಯ

    March 8, 2026

    ಡಿಜಿಟಲ್ ಅರೆಸ್ಟ್: ಹೊಸ ಹೆಸರಿನಲ್ಲಿ ಹಳೆಯ ಮೋಸ –ಜಾಗರೂಕರಾಗಿರಿ

    March 8, 2026

    ಹಸೆ ಮಣೆ ಮೇಲೆ ಕುಂಡ್ರಿಸಿ ಕೊಡಬೇಕಿತ್ತೇನೋ ದುಡ್ಡ? | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 2)

    March 5, 2026

    Comments are closed.

    Our Picks

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026

    LPG ಸಿಲಿಂಡರ್‌ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸಾವು!

    March 14, 2026

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ ಇಲ್ಲ: ಸಚಿವ ಕೆ.ಎಚ್‌.ಮುನಿಯಪ್ಪ

    March 17, 2026

    ಬೆಂಗಳೂರು: ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್‌ ನಿಂದ ಅಗತ್ಯಕ್ಕಿಂತ ಹೆಚ್ಚು…

    ರಾಷ್ಟ್ರನಾಯಕರ ಜಯಂತಿ ಆಚರಣಾ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು: ಸಭೆಯಿಂದ ಹೊರ ನಡೆದ ಮುಖಂಡರು

    March 16, 2026

    ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

    March 16, 2026

    ಶಾಸಕರ ಪ್ರಶ್ನೆಗಳಿಗೆ ಉತ್ತರವಿಲ್ಲ: ‘ಹೀಗಾದರೆ ಸದನ ನಡೆಸುವುದು ಹೇಗೆ?’: ಸದನದಿಂದ ಹೊರನಡೆದ ಸ್ಪೀಕರ್ ಯು.ಟಿ. ಖಾದರ್

    March 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.