ನಿತೀಶ್ ಕುಮಾರ್ ಮಂಗಳವಾರ ರಾಜೀನಾಮೆ ಘೋಷಿಸಿದ್ದು, ಬಿಜೆಪಿ ಜೊತೆಗಿನ ಮೈತ್ರಿಗೆ ಗುಡ್ ಬೈ ಹೇಳಿದ್ದಾರೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಮತ್ತೊಮ್ಮೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ ಅವರು ಪ್ರಧಾನಿಯಾಗಲು ಸಾಧ್ಯವಾಗದೇ ಬೇರೆಯವರೊಂದಿಗೆ ಮೈತ್ರಿಗಾಗಿ ಬಿಜೆಪಿ ತೊರೆದಿದ್ದಾರೆ ಎಂದು ಕಮಲ ಪಕ್ಷ ಟೀಕಿಸಿದೆ.
ತಾವು ಧರ್ಮದಲ್ಲಿ ನಂಬಿಕೆ ಇಟ್ಟಿದ್ದು, ನಿತೀಶ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿಯುವುದಿಲ್ಲ ಎಂದು ಬಿಜೆಪಿ ಘೋಷಿಸಿದೆ. ಏತನ್ಮಧ್ಯೆ, ತಮ್ಮ ರಾಜಕೀಯ ಜೀವನದಲ್ಲಿ ಏನೇ ಏರಿಳಿತಗಳ ನಡುವೆಯೂ 8ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ.
ಮೊದಲ ಬಾರಿಗೆ: ಮಾರ್ಚ್, 2000
ಎರಡನೇ ಬಾರಿ: ನವೆಂಬರ್, 2005
ಮೂರನೇ ಬಾರಿ: ನವೆಂಬರ್, 2010
ನಾಲ್ಕನೇ ಬಾರಿ: ಫೆಬ್ರವರಿ, 2015
ಐದನೇ ಬಾರಿ: ನವೆಂಬರ್, 2015
ಆರನೇ ಬಾರಿ: ಜುಲೈ, 2017
ಏಳನೇ ಬಾರಿ: ನವೆಂಬರ್, 2020
ಎಂಟನೇ ಬಾರಿ: 10, ಆಗಸ್ಟ್, 2022
ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಬಿಹಾರದ ಜನರೆಲ್ಲ ಪ್ರಧಾನಿ ಮೋದಿಗೆ ಮತ ಹಾಕಿದ್ದಾರೆ. ನಿತೀಶ್ ಕುಮಾರ್ 2019 ಮತ್ತು 2020ರಲ್ಲಿ ಪ್ರಧಾನಿ ಮೋದಿಯನ್ನು ತೋರಿಸಿ ಗೆದ್ದರು. ಈಗ ಜನರಿಗೆ ದ್ರೋಹ ಬಗೆದಿದ್ದಾರೆ ಎಂದಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy