ತುಮಕೂರು: ಬೆಂಗಳೂರು, ತುಮಕೂರು ಮತ್ತು ಅರಸೀಕೆರೆ ಮಾರ್ಗವಾಗಿ ಪ್ರಯಾಣಿಸುವ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದೆ. ಈ ಮಾರ್ಗದಲ್ಲಿ ಹೊಸ ಮೆಮು (MEMU) ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದ್ದಾರೆ.
ಈ ನೂತನ ರೈಲು ಸೇವೆಯು ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ಆರಂಭವಾಗಿ, ಯಶವಂತಪುರ ಮತ್ತು ತುಮಕೂರು ಮಾರ್ಗವಾಗಿ ಅರಸೀಕೆರೆಯನ್ನು ತಲುಪಲಿದೆ.
ಈ ಮೆಮು ರೈಲು ಸೇವೆಯು ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಲಭ್ಯವಿರುತ್ತದೆ. ಯಲಹಂಕದಿಂದ ಅರಸೀಕೆರೆಗೆ (ರೈಲು ಸಂಖ್ಯೆ 66505): ಬೆಳಿಗ್ಗೆ 6:45ಕ್ಕೆ ಯಲಹಂಕದಿಂದ ಹೊರಟು, ಬೆಳಿಗ್ಗೆ 8:58ಕ್ಕೆ ತುಮಕೂರು ತಲುಪಲಿದೆ. ನಂತರ ಬೆಳಿಗ್ಗೆ 11:00 ಗಂಟೆಗೆ ಅರಸೀಕೆರೆಗೆ ತಲುಪಲಿದೆ.
ಅರಸೀಕೆರೆಯಿಂದ ಯಲಹಂಕಕ್ಕೆ (ರೈಲು ಸಂಖ್ಯೆ 66506): ಮಧ್ಯಾಹ್ನ 2:15ಕ್ಕೆ ಅರಸೀಕೆರೆಯಿಂದ ಹೊರಟು, ಸಂಜೆ 4:38ಕ್ಕೆ ತುಮಕೂರು ತಲುಪಿ, ರಾತ್ರಿ 7:15ಕ್ಕೆ ಯಲಹಂಕಕ್ಕೆ ವಾಪಸಾಗಲಿದೆ.
ಈ ನೂತನ ರೈಲು ಸಂಚಾರದಿಂದಾಗಿ ಪ್ರತಿನಿತ್ಯ ನಗರಗಳಿಗೆ ಸಂಚರಿಸುವ ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು, ರೈತರು ಹಾಗೂ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


