ತುಮಕೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್ ಎಂಬುವರನ್ನು ನೇಮಕ ಮಾಡಲಾಗುತ್ತಿದೆ. ಶ್ರೀ ಸಿದ್ದಗಂಗಾ ಮಠದ ಪರಂಪರೆಯಲ್ಲಿ ಉತ್ತರ ಅಧಿಕಾರಿಗಳನ್ನು ಈವರೆಗೂ ನೇಮಕ ಮಾಡದೆ ಇರುವುದನ್ನು ಗಮನಿಸಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈ ಕುರಿತಂತೆ, ಸಿದ್ದಗಂಗಾ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ಟಿ.ಕೆ.ನಂಜುಂಡಪ್ಪ ಮಠದ ಸದಸ್ಯರಿಗೆ ಕಳುಹಿಸಿರುವ ಪತ್ರ ಒಂದರಲ್ಲಿ ಉಲ್ಲೇಖಿಸಿದ್ದಾರೆ.
ನಿರಂಜನ ಪಟ್ಟಾಧಿಕಾರಿ ಹಾಗೂ ಉತ್ತರ ಅಧಿಕಾರಿ ಆಗಿ ನೇಮಕ ಮಾಡಲಾಗುತ್ತಿದೆ. ಏಪ್ರಿಲ್ 23 ರಂದು ಅಕ್ಷಯ ತೃತೀಯ ದಿನದಂದು ಬಸವ ಜಯಂತಿಯು ಕೂಡ ಇರುವುದರಿಂದ ಅಂದೆ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಮೈಲನ ಹಳ್ಳಿಯ ಷಡಕ್ಷರಯ್ಯ ಮತ್ತು ವಿರೂಪಾಕ್ಷಮ್ಮ ರವರ ಪುತ್ರರಾಗಿದ್ದಾರೆ ಮನೋಜ್ ಕುಮಾರ್ ಬಿ ಈ ಡಿ, ಎಂ ಎಸ್ ಸಿ, ಸಿಎಂಎ, ಹಾಗೂ ವಿದ್ವತ್ ಪೂರ್ಣಗೊಳಿಸಿ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದ. ಇವರನ್ನು ಬಸವ ಜಯಂತಿ ಹಬ್ಬದಂದು ಶ್ರೀ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು.
ಅದೇ ರೀತಿ ಮಾಗಡಿ ತಾಲೂಕಿನಲ್ಲಿರುವ ಕುಂಚಗಲ್ ಬಂಡೆ ಮಠಕ್ಕೂ ಕೂಡ ಹರ್ಷ ಎಂಬುವರನ್ನು ಉತ್ತರ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತಿದೆ, ಅದೇ ರೀತಿ ದೇವನಹಳ್ಳಿಯಲ್ಲಿರುವ ಬಸವ ಕಲ್ಯಾಣ ಮಟಕ್ಕೂ ಕೂಡ ಗೌರೀಶ್ ಕುಮಾರ್ ಎಂಬುವರನ್ನು ಉತ್ತರಾಧಿಕಾರಿಯನ್ನಾಗಿ ಅಂದೆ ನೇಮಕ ಮಾಡಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy