ಇಂದಿನಿಂದ, ದೂರಸಂಪರ್ಕ ಇಲಾಖೆ (DoT) ಆನ್ ಲೈನ್ ಹಣಕಾಸು ವಂಚನೆಯನ್ನು ನಿಭಾಯಿಸಲು SIM ಕಾರ್ಡ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಡೀಲರ್ ಗಳು 10 ಲಕ್ಷ ರೂಪಾಯಿ ದಂಡವನ್ನು ಎದುರಿಸಬೇಕಾಗುತ್ತದೆ.
ಹೊಸ ಸಿಮ್ ಕಾರ್ಡ್‌ಗಳಿಗಾಗಿ ಗ್ರಾಹಕ KYC ಪ್ರಕ್ರಿಯೆ, ಸಿಮ್ ಕಾರ್ಡ್‌ಗಳ ಬೃಹತ್ ಖರೀದಿಗಳನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ವಂಚನೆಯನ್ನು ತಡೆಯಲು ಡೀಲರ್ ಗಳಿಗೆ ಕಡ್ಡಾಯ ಪರಿಶೀಲನೆ ಮುಂತಾದ ನಿಯಮ ಜಾರಿಗೆ ತಂದಿದೆ ಎನ್ನಲಾಗಿದೆ.


