ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಇಸ್ರೇಲ್ ಮಿಲಿಟರಿಯ ದಾಳಿಗೆ ಸಾವನ್ನಪ್ಪಿದ್ದಾನೆ. ಇದು ಮತ್ತೊಂದು ವಿಶ್ವ ಯುದ್ಧಕ್ಕೆ ಕಾರಣವಾಗುತ್ತಾ? ಅನ್ನೋ ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಲೆಬನಾನ್ ಜನರು ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಸಾವಿನ ಸುದ್ದಿಯನ್ನ ನೋವಿನಿಂದ ಸ್ವೀಕರಿಸಿದ್ದಾರೆ. ಶೇಕ್ ಹಸನ್ ನಸ್ರಲ್ಲಾ ಸಾವಿನ ಬಗ್ಗೆ ಸುದ್ದಿ ಓದುತ್ತಿದ್ದ ನ್ಯೂಸ್ ಆ್ಯಂಕರ್ ದುಃಖದಿಂದ ಗದ್ಗದಿತರಾದ ವಿಡಿಯೋ ವೈರಲ್ ಆಗಿದೆ.
ಶೇಕ್ ಹಸನ್ ನಸ್ರಲ್ಲಾ ಸಾವಿನ ಸುದ್ದಿ ಓದುವಾಗ ನ್ಯೂಸ್ ಆ್ಯಂಕರ್ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಇದೀವ ವ್ಯಾಪಕ ವೈರಲ್ ಆಗಿದೆ.
ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಶತ್ರುತ್ವ ಇಂದು ನಿನ್ನೆಯದ್ದಲ್ಲ. ಇಬ್ಬರ ನಡುವೆ ಹತ್ತಾರು ವರ್ಷಗಳಿಂದ ಇದೇ ರೀತಿ ಕಿತ್ತಾಟ ಇದ್ದು, ಒಬ್ಬರ ಮೇಲೊಬ್ಬರು ದಾಳಿ ಮಾಡಿದ್ದಾರೆ. ಹೀಗಿದ್ದಾಗ ದಿಢೀರ್ ಇಸ್ರೇಲ್ ಸೇನೆ ಲೆಬನಾನ್ ದಕ್ಷಿಣ ಭಾಗದ ಮೇಲೆ ಮುಗಿಬಿದ್ದಿದ್ದು, ಈ ಭೀಕರ ದಾಳಿಗೆ ಮಧ್ಯಪ್ರಾಚ್ಯ ನಲುಗಿ ಹೋಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಜೀವ ತೆಗೆದಿರುವ ಇಸ್ರೇ ಲ್ನ ಮಿಲಿಟರಿ, ಮತ್ತಷ್ಟು ಬಲಿಗಾಗಿ ಕಾದು ಕುಳಿತಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296