ಹಲಗೂರು: ನಿವೃತ್ತಿ ಆದವರಿಗೆ ಸನ್ಮಾನ ಕಾರ್ಯಕ್ರಮ ಸ್ವಾಮಿ ವಿದ್ಯಾಸಂಸ್ಥೆ ಜೆಪಿಎಂ ಸ್ಮಾರಕ ಸ್ವತಂತ್ರ ಪದವಿ ಪೂರ್ವ ಕಾಲೇಜು, ಹಲಗೂರು ಕಾಲೇಜು ಆವರಣದಲ್ಲಿ ನಡೆಯಿತು.
ಮಳವಳ್ಳಿ ಕ್ಷೇತ್ರ ದ ಶಾಸಕರಾದ ಡಾ.ಕೆ.ಅನ್ನದಾನಿ ಮಾತನಾಡಿ, ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಕಾಲೇಜಿನಲ್ಲಿ ಹಂತದಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದೀರಿ. ಒಳ್ಳೆಯ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗಕ್ಕೆ ಹೋಗಬೇಕು . ನಮ್ಮ ಪ್ರಜಾಪ್ರಭುತ್ವದಲ್ಲಿ ಉತ್ತಮ ಪ್ರಜೆಯನ್ನು ಆಯ್ಕೆ ಮಾಡುವ ಹಕ್ಕು ನಿಮ್ಮದಾಗಿದೆ.
ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ ಹಾಕುವ ಪಟ್ಟಿಯಲ್ಲಿ ಸೇರಬೇಕು, ನೀವು ಹಾಕುವ ಮತ ಮೊದಲನೆಯದು ನಮಗೆ ಮತ ಹಾಕಬೇಕು. ನಿಮ್ಮ ಸೇವೆ ಮಾಡಲು ನನಗೆ ಮತ ಹಾಕಿ ಬೆಂಬಲಿಸಬೇಕು ಎಂದರು. ನಂತರ ಶಾಲೆಯ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಹಾಡನ್ನು ಹಾಡಿ ರಂಜಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ನೀವು ಅಬ್ದುಲ್ ಕಲಾಂ ಹೆಸರು ಕೇಳಿದ್ದೀರಿ, ಅವರು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಹಾರುವ ಹಕ್ಕಿಯಾಗಿ ಆಗಬೇಕು ಎಂದು ಕನಸು ಕಂಡವರು. ಹಾಗೆಯೇ ವಿಜ್ಞಾನಿಯಾದರು. ನಮ್ಮ ದೇಶದ ರಾಷ್ಟ್ರಪತಿಯೂ ಆದ ಎಂದರು.
ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ನಿವೃತ್ತ ಪ್ರಾಂಶುಪಾಲರಾದ ಪುಟ್ಟಸ್ವಾಮಿ. ನಿವೃತ್ತ ದೈಹಿಕ ಶಿಕ್ಷಕ ಶಶಿಕುಮಾರ್. ದ್ವಿತೀಯ ದರ್ಜೆ ಸಹಾಯಕ ಸೋಮಲಿಂಗೇಗೌಡ ರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಮ್ ದೇವೇಗೌಡ. ಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೇಶವ. ಪ್ರೊಫೆಸರ್ ಬೋರಪ್ಪ. ಚಂದ್ರು. ಸುಹೇಲ್. ಹಾಜರಿದ್ದರು.
ವರದಿ: ಶ್ರೀನಿವಾಸ, ಮಂಡ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


