ನಿತ್ಯಾನಂದ ಸೃಷ್ಟಿರುವ ಕೈಲಾಸ ದೇಶ ಎಲ್ಲಿದೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗುವ ದಿನ ದೂರವಿಲ್ಲ. ಈ ಬಾರಿ ಗುರು ಪೂರ್ಣಿಮೆ ದಿನ ನಿತ್ಯಾನಂದ ತಮ್ಮ ಕೈಲಾಸ ದೇಶದ ವಿಳಾಸ ಬಹಿರಂಗಪಡಿಸಲಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ 2019ರಲ್ಲಿ ನಿತ್ಯಾನಂದ ಬಿಡದಿ ಆಶ್ರಮದಿಂದ ಪರಾರಿಯಾಗಿದ್ದ.ನಂತರ ಕೈಲಾಸ ಸೃಷ್ಟಿಸಿರುವ ನಿತ್ಯಾನಂದನ ಕೈಲಾಸ ದೇಶ ಎಲ್ಲಿದೆ ಅನ್ನೋ ಪ್ರಶ್ನೆಗಳಿಗೆ ಮಾತ್ರ ಉತ್ತರವೇ ಇರಲಿಲ್ಲ. ನಿತ್ಯಾನಂದ ಹೇಳುವ ಪ್ರಕಾರ ಕೈಲಾಸ ದೇಶ ನಿಜವಾಗಿಯೂ ಅಸ್ತಿತ್ವದಲ್ಲಿ ಇದೆಯಾ ಅನ್ನೋ ಅನುಮಾನಗಳು ಇವೆ. ಈ ಅನುಮಾನ, ಕುತೂಹಲದ ನಡುವೆ ಇದೀಗ ಸ್ವತಃ ನಿತ್ಯಾನಂದ ಕೈಲಾಸ ದೇಶದ ವಿಳಾಸ ಬಹಿರಂಗ ಮಾಡುವುದಾಗಿ ಹೇಳಿದ್ದಾನೆ.
ಗರು ಪೂರ್ಣಿಮೆ ದಿನ(ಜುಲೈ 21) ಸೌರ್ವಭೌಮ ದೇಶವಾದ ಕೈಲಾಸದ ವಿಳಾಸ ಬಹಿರಂಗಪಡಿಸುತ್ತಿದೆ. ಕೈಲಾಸ ದೇಶ ನಿಜಕ್ಕೂ ಇದೆಯಾ? ಅನ್ನೋ ಪ್ರಶ್ನೆ, ವದಂತಿಗಳನ್ನು ನೀವು ಕೇಳಿರುತ್ತೀರಿ. ಈ ಗುರು ಪೂರ್ಣಿಮೆ ದಿನ ಕೈಲಾಸ ಜಗತ್ತಿಗೆ ತನ್ನ ಬಾಗಿಲು ತೆರೆಯುತ್ತಿದೆ. ಕೈಲಾಸ ಹಿಂದುಗಳ ದೇಶ. ಅಪ್ಪಟ ಹಿಂದುಗಳು ಕೈಲಾಸದ ದೇಶದ ಪ್ರಜೆಯಾಗಲು ಸುವರ್ಣ ಅವಕಾಶವಿದೆ. ಕೈಲಾಸ ಹಿಂದು ದೇಶದ ಪ್ರಜೆಯಾಗಲು ನಿಮ್ಮನ್ನು ಆಹ್ವಾನಿಸುತ್ತಿದೆ. ಈ ಅವಕಾಶ ನಿಮ್ಮ ಜೀವಿತದ ಅವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಬರಲಿದೆ. ಮಿಸ್ ಮಾಡಿಕೊಳ್ಳಬೇಡಿ ಎಂದು ನಿತ್ಯಾನಂದ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿ ಪ್ರಕಟಿಸಿದ್ದಾನೆ.
🌍 This Guru Purnima, KAILASA Reveals the Location of One of Its Sovereign Lands! 🌕
The wait is finally over! After years of speculation and curiosity, KAILASA is ready to unveil the location of one of its sovereign lands.
You’ve heard the rumors, you’ve wondered if it’s real… pic.twitter.com/nlIZZewIeE
— KAILASA’s SPH NITHYANANDA (@SriNithyananda) July 3, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA