ನಿವೃತ್ತ ನ್ಯಾಯಾಧೀಶ ಎಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಸಾಮಾಜಿಕ ನ್ಯಾಯ ಸಂಕಲ್ಪ ರಾಲಿಯನ್ನು ಹಮ್ಮಿಕೊಳ್ಳಲಾಯಿತ್ತು.
ಚಲೋ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ವತಿಯಿಂದ ಬೆಳಗಾವಿ ಚಲೋ ನಡೆಸಲಾಯಿತು.
ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದ ವರೆಗೆ ಪರಿಶಿಷ್ಟರ ಒಳ ಮೀಸಲಾತಿ ಜಾರಿಗಾಗಿ ಸಾಮಾಜಿಕ ನ್ಯಾಯ ಸಂಕಲ್ಪ ರಾಲಿಯನ್ನು ರಾಜ್ಯಾಧ್ಯಕ್ಷರಾದ ಡಾ. ಎನ್ ಮೂರ್ತಿ ಮತ್ತು ಜಿಲ್ಲಾಧ್ಯಕ್ಷರಾದ ಶಿವಾನಂದ ಮಾದರ ಮತ್ತು ಸಂಚಾಲಕರಾದ ಸಿದ್ದರಾಮ ಹೊಸಮನಿ ಮತ್ತು ಬೈಲಹೊಂಗಲ ತಾಲೂಕ ಅಧ್ಯಕ್ಷರಾದ ಮಹೇಶ್ವರಿ ಅವರ ನೇತೃತ್ವದಲ್ಲಿ ನಡೆಯಿತು.
ರಾಜ್ಯಾಧ್ಯಕ್ಷ ಎನ್ ಮೂರ್ತಿಯವರು ರಾಲಿ ಮುಖ್ಯ ಕಾರಣವನ್ನು ಉದ್ದೇಶದ ಬಗ್ಗೆ ಮಾತನಾಡಿ, 101 ಪರಿಶಿಷ್ಟ ಜಾತಿಗಳಿಗೆ ನೀಡುತ್ತಿರುವ ಮೀಸಲಾತಿ ಜಾತಿಗಳ ಮಧ್ಯೆ ಸಮನಾಗಿ ಹಂಚಿಕೆ ಆಗಿಲ್ಲ.ಆದ್ದರಿಂದ ಪರಿಶಿಷ್ಟ ಜಾತಿಗಳ ಜನರಲ್ಲಿ ಅಸಮಾಧಾನ ಉಂಟಾಗಿ ಕಳೆದ 30 ವರ್ಷಗಳಿಂದ ಪರಿಶಿಷ್ಟ ಮೀಸಲಾತಿಗಾಗಿ ಒತ್ತಾಯಿಸಿ ತೀವ್ರ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಚಳುವಳಿಗಾರರೊಂದಿಗೆ ಚರ್ಚಿಸಿ ಮಾತುಕತೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, ಪರಿಶಿಷ್ಟ ಮೀಸಲಾತಿ ವರ್ಗೀಕರಣಕ್ಕಾಗಿ 2005 ರಲ್ಲಿನ ಸದಾಶಿವ ಆಯೋಗ ರಚಿಸಿ 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇಲ್ಲಿಗೆ 17 ವರ್ಷ ಕಳೆದರೂ ಆಯೋಗದ ವರದಿಯನ್ನು ಸರ್ಕಾರ ಅಂಗೀಕರಿಸಿಲ್ಲ ಅನುಷ್ಠಾನಗೊಳಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


