ಹೊಸ ವರ್ಷಕ್ಕೆ ಈ ಬಾರಿ ಯಾವುದೇ ಕಂಡೀಷನ್ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಹೊಸ ವರ್ಷಕ್ಕೆ ಯಾವದೇ ಕಂಡೀಷನ್ ಇಲ್ಲ. ಕಳೆದ ಬಾರಿಯೂ ಯಾವದೇ ಕಂಡೀಷನ್ ಇರಲಿಲ್ಲ. 2022 ರಲ್ಲಿ ಕೋವಿಡ್ ಕಾರಣದಿಂದ ನಿರ್ಬಂಧ ಹಾಕಲಾಗಿತ್ತು. ಈ ಬಾರಿಯೂ ಎಲ್ಲಾ ನಿರ್ಬಂಧಗಳು ಸಡಿಲಿಕೆ ಮಾಡುತ್ತೇವೆ. ಸುರಕ್ಷತೆ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸುತ್ತಾರೆ ಎಂದು ಹೇಳಿದ್ದಾರೆ.


