nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026
    Facebook Twitter Instagram
    ಟ್ರೆಂಡಿಂಗ್
    • ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ
    • ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ
    • ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
    • ಕೂಲಿ ಚಿತ್ರದ ಬಳಿಕ ಅಲ್ಲು ಅರ್ಜುನ್‍ಗೆ ಚಿತ್ರ ಕೈಗೆತ್ತಿಕೊಂಡ ಲೋಕೇಶ್ ಕನಕರಾಜು
    • ಮಾದೇನಹಳ್ಳಿ: ಮುಖ್ಯ ಶಿಕ್ಷಕಿ ಗುಣಶೀಲರವರಿಗೆ ಬೀಳ್ಕೊಡುಗೆ: ಸುಮಾರು 14 ವರ್ಷಗಳಿಂದ ಸೇವೆ
    • ಐಎಎಸ್ / ಕೆಎಎಸ್ ಪರೀಕ್ಷೆಗೆ ತರಬೇತಿ:  ಹೆಸರು ನೋಂದಾಯಿಸುವುದು ಹೇಗೆ?
    • ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ
    • ಜ.22–25: ಚಿಕ್ಕಗೊಳ್ಳ ದೇವಾಲಯ ಕಳಸ ಸ್ಥಾಪನೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಾಟಕಗಳ ಪ್ರದರ್ಶನಕ್ಕೆ ಆಸಕ್ತರಿಗೆ ಆಹ್ವಾನದ ಅಗತ್ಯವಿಲ್ಲ: ಕೆ.ಎಸ್.ಸಿದ್ದಲಿಂಗಪ್ಪ
    ತುಮಕೂರು February 21, 2025

    ನಾಟಕಗಳ ಪ್ರದರ್ಶನಕ್ಕೆ ಆಸಕ್ತರಿಗೆ ಆಹ್ವಾನದ ಅಗತ್ಯವಿಲ್ಲ: ಕೆ.ಎಸ್.ಸಿದ್ದಲಿಂಗಪ್ಪ

    By adminFebruary 21, 2025No Comments2 Mins Read
    suyodhana

    ತುಮಕೂರು: ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳಿಗೆ ಸಿಮೀತವಾಗಿದ್ದ ಭಾರತೀಯ ರಂಗಭೂಮಿಯಲ್ಲಿ ಸಾಮಾಜಿಕ ನಾಟಕಗಳ ಪ್ರಯೋಗ ಆರಂಭವಾದ ನಂತರ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಸಾಮಾಜಿಕ ನಾಟಕಗಳು ಮನರಂಜನೆಯ ಜೊತೆಗೆ, ನಮ್ಮ ಸುತ್ತಮುತ್ತಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಆಗು ಹೋಗುಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.

    ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡಿ(ರಿ),ತುಮಕೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ “ಸುಯೋಧನ”ನಾಟಕ ಪ್ರಯೋಗಕ್ಕೆ ಚಂಡೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಾಟಕಗಳ ಪ್ರದರ್ಶನಕ್ಕೆ ಆಸಕ್ತರಿಗೆ ಆಹ್ವಾನದ ಅಗತ್ಯವಿಲ್ಲ. ಇಲ್ಲಿ ಸೇರಿರುವ ಎಲ್ಲಾ ರಂಗಾಸಕ್ತರು ಕಲಾವಿದರನ್ನು ಪ್ರೋತ್ಸಾಹಿಸಿ, ಅವರು ಮತ್ತಷ್ಟು ಪ್ರಯೋಗಗಳನ್ನು ಮಾಡುವಂತೆ ಪ್ರೇರೇಪಿಸಲಿ ಎಂದು ಶುಭ ಹಾರೈಸಿದರು.


    Provided by
    Provided by

    ಸಾಹಿತಿ ಡಾ.ಬಿ.ಸಿ.ಶೈಲಾ ನಾಗರಾಜು ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಸುಮಾರು 15ಕ್ಕೂ ಹೆಚ್ಚು ವರ್ಷಗಳಿಂದ ರಂಗಭೂಮಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಹಲವಾರು ಹೊಸ ನಾಟಕಗಳು,ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ. ಪೌರಾಣಿಕ ವಸ್ತುಗಳನ್ನೇ ತೆಗೆದುಕೊಂಡು,ಸಾಮಾಜಿಕ ನಾಟಕ ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ. ಈ ತಂಡ ಪ್ರಯೋಗಿಸುತ್ತಿರುವ ಸುಯೋಧನ ನಾಟಕ 15ಕ್ಕೂ ಹೆಚ್ಚು ಪ್ರಯೋಗ ಕಂಡಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ರಂಗ ತಂಡಗಳಿಗೆ ಹಣಕಾಸು ನೆರವಿಗಿಂತ, ಪ್ರೇಕ್ಷಕರಾಗಿ ಪಾಲ್ಗೊಂಡು, ನಾಟಕ ನೋಡುವ ಮೂಲಕವೂ ರಂಗಭೂಮಿಯನ್ನು ಬೆಳೆಸಬಹುದಾಗಿದೆ ಎಂದರು.

    ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಸಿ.ಹೆಚ್.ಸಿದ್ದಯ್ಯ ಮಾತನಾಡಿ, ರಂಗಭೂಮಿಯ ಉದಯ ಗ್ರೀಕ್ ದೇಶದಲ್ಲಿ ಆಗಿದ್ದು, ಅದನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು, ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಮಂಡಳಿ. ಕಲ್ಪತರು ನಾಟಕ ರಂಗಭೂಮಿಗೆ ಅನೇಕ ಕಲಾವಿದರು, ತಂತ್ರಜ್ಞರನ್ನು ಕೊಡುಗೆಯಾಗಿ ನೀಡಿದೆ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಪ್ರಯೋಗಾತ್ಮಕ ನಾಟಕಗಳಿಗೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಯಾಯಾತಿ, ಸಂಕ್ರಾಂತಿ, ಸುಯೋಧನ, ತೆರೆಗಳು, ಸಿದ್ದಮಾದೇಶ ಹೀಗೆ ಹತ್ತು ಹಲವು ಪ್ರಯೋಗಗಳನ್ನು ತುಮಕೂರಿನಲ್ಲಿ ಮಾಡಿರುವುದನ್ನು ಕಾಣಬಹುದಾಗಿದೆ.ಇಲ್ಲಿ ಅಭಿನಯಿಸಿದ ಹಲವು ಕಲಾವಿದರು ಕಿರುತೆರೆ, ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ರಂಗಭೂಮಿ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.

    ಪತ್ರಕರ್ತ ರಂಗನಾಥ ಕೆ.ಮರಡಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕಲ್ಪತರು ನಾಡು ಎಂದು ಕರೆಯುವ ಹಾಗೆಯೇ, ಅದು ಕಲೆಗಳ ತವರೂರು ಕೂಡ ಆಗಿದೆ. ಕಲೆ, ಬೆಳೆಯಬೇಕು ಮತ್ತು ಉಳಿಯಬೇಕು ಎಂದರೆ ಇಂತಹ ರಂಗ ತಂಡಗಳನ್ನು ಪ್ರೋತ್ಸಾಹಿಸಬೇಕು ಎಂದರು.

    ಉಪನ್ಯಾಸಕ ಡಾ. ಪವನ್ ಗಂಗಾಧರ್ ಮಾತನಾಡಿ, ನಾಟಕಗಳು ಕೇವಲ ಮನರಂಜನೆಯನಷ್ಟೇ ನೀಡುವುದಿಲ್ಲ. ಭಾಷೆ, ಸಂಸ್ಕೃತಿ, ಪರಂಪರೆಯನ್ನು ಬೆಳೆಸುವುದರ ಜೊತೆಗೆ, ಜ್ಞಾನದಾಹವನ್ನು ಹೆಚ್ಚಿಸುತ್ತವೆ. ಗ್ರೀಕ್‌ನ ಈಡಿಪಸ್ ನಾಟಕವನ್ನು ಮುಂದಿಟ್ಟುಕೊಂಡು ಸೈಕೋ ಅನಾಲಿಸಿಸ್ ಥಿಯರಿ ಎಂಬ ಹೊಸ ಜ್ಞಾನ ಶಿಸ್ತು ಹುಟ್ಟಿಕೊಂಡಿತ್ತು. ಇಂತಹ ಅನೇಕ ಉದಾಹರಣೆಗಳಿಗೆ ರಂಗಭೂಮಿ ಕಾರಣವಾಗಿದೆ ಎಂದರು.

    ವೇದಿಕೆಯಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ರಂಗ ಸಂಘಟಕ ಶಿವಕುಮಾರ್ ತಿಮ್ಮಲಾಪುರ, ಸ್ವಾಂದೇನಹಳ್ಳಿ ಸಿದ್ದರಾಜು, ಕಾಂತರಾಜು ಕೌತುಮಾರನಹಳ್ಳಿ, ಆಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಐಎಎಸ್ / ಕೆಎಎಸ್ ಪರೀಕ್ಷೆಗೆ ತರಬೇತಿ:  ಹೆಸರು ನೋಂದಾಯಿಸುವುದು ಹೇಗೆ?

    January 15, 2026

    ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ

    January 15, 2026

    ಸ್ವಂತ ಉದ್ಯಮ ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

    January 15, 2026

    Comments are closed.

    Our Picks

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಬೆಂಗಳೂರು: ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆಯೊಂದರಲ್ಲಿ ಭೀಕರ ಘಟನೆಯೊಂದು ಸಂಭವಿಸಿದ್ದು, 55 ವರ್ಷದ ಮಹಿಳೆಯನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ…

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026

    ಕೂಲಿ ಚಿತ್ರದ ಬಳಿಕ ಅಲ್ಲು ಅರ್ಜುನ್‍ಗೆ ಚಿತ್ರ ಕೈಗೆತ್ತಿಕೊಂಡ ಲೋಕೇಶ್ ಕನಕರಾಜು

    January 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.