ಶಿವಮೊಗ್ಗ: ಪ್ರತಾಪ್ ಸಿಂಹ ಅವರಂತಹ ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಖಂಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸತ್ ಭವನದಲ್ಲಿ ಭಾರೀ ಭದ್ರತೆ ಇದ್ದರು ಸಹ ಕಿಡಿಗೇಡಿಗಳು ನುಗ್ಗಿ ಇಂತಹ ಕೃತ್ಯ ನಡೆಸಿದ್ದು ಬಹಳ ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿ ಎಂದು ಹೇಳಿದರು.
ಸಂಸತ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆ ನಡೆಯಬೇಕು ಅಂತ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಾಯಕರಿಗೆ ಮಾಡಲು ಬೇರೆ ಕೆಲಸವಿಲ್ಲ ಪ್ರತಾಪ್ ಸಿಂಹ ನಂತಹ ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಶಂಕಿಸುವುದು, ಖಂಡಿಸುವುದು ಕೇವಲ ಕಾಂಗ್ರೆಸ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.


