ಸನ್ನಿ ಲಿಯೋನ್ ಫೋಟೋಗಳಿಗಾಗಿ, ವೀಡಿಯೋಗಳಿಗಾಗಿ ಇಂಟರ್ನೆಟ್ ನಲ್ಲಿ ಹುಡುಕುವವರ ಸಂಖ್ಯೆ ಕಡಿಮೆಯೇನಿಲ್ಲ.ಅಂಥ ಸನ್ನಿ ಲಿಯೋನ್ ಈಗ ಸಿನಿಮಾ ನಟಿಯಾಗಿ ಬದಲಾಗುತ್ತಿದ್ದಾರೆ. ಒಂದಾದ ಮೇಲೆ ಮತ್ತೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸನ್ನಿ ಮೊದಲು ಹಾಟ್ ಸ್ಟಾರ್ ಪಟ್ಟದಲ್ಲಿದ್ದರು. ಈಗ ನಟಿಯಾಗಿ ಬದಲಾಗಿದ್ದಾರೆ. ಭಾರತದಲ್ಲಿ ನಾರ್ತ್–ಸೌತ್ ಬೇಧವಿಲ್ಲದೇ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಸಿಕ್ಕ ಆಫರ್ ಬಿಟ್ಟುಕೊಡದೇ ನಟಿಸುತ್ತಿದ್ದಾರೆ. ಏಕೆಂದರೆ, ಸನ್ನಿ ಲಿಯೋನ್ ಅವರಿಗೆ ಈಗ ತಮ್ಮ ಇಮೇಜ್ ಇನ್ನೂ ಹೆಚ್ಚು ಬದಲಿಸಿಕೊಳ್ಳಬೇಕಿದೆ. ಈಗಾಗಲೇ ಬ್ಲೂ ಫಿಲಂ ನಟಿ ಇಮೇಜ್ ನಿಂದ ಹೊರಬಂದಿರುವ ನಟಿ ಸನ್ನಿ ಲಿಯೋನ್, ಎಲ್ಲರಂತೆ ನಟಿ ಪಟ್ಟಕ್ಕೆ ಲಗ್ಗೆ ಇಟ್ಟಾಗಿದೆ. ಇನ್ನೇನಿದ್ದರೂ ಅವರ ಗುರಿ ‘ಕಲಾವಿದೆ’ ಪಟ್ಟ ಎನ್ನಲಾಗಿದೆ.
ಕೆನಡಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ್ದ ಸನ್ನಿ ಲಿಯೋನ್ ಅವರು ತಾವು ಶ್ರೀಮಂತೆ ಆಗಲು ವಯಸ್ಕರ ಸಿನಿಮಾ ನಟಿಯಾಗಿ ಬದಲಾದರು ಎನ್ನಲಾಗಿದೆ. ಆದರೆ, ಒಂದು ಹಂತದಲ್ಲಿ ದುಡ್ಡು ಎಲ್ಲವೂ ಅಲ್ಲ, ಜೀವನ ಹಾಗೂ ಸಮಾಜದಲ್ಲಿ ಗೌರವ ಮುಖ್ಯ ಎನಿಸಿತಂತೆ. ಈ ಕಾರಣಕ್ಕೆ ಅದೊಂದು ಚಿನ ತಾವಿನ್ನು ಕತ್ತಲ ಕೋಣೆಯಲ್ಲಿ ಅಡಲ್ಟ್ ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿ ಅಲ್ಲಿಂದ ಹೊರಗೆ ಬಂದುಬಿಟ್ಟರು ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಇಂದು ಯಶಸ್ವಿ ನಟಿಯಾಗಿರುವ ಗುಟ್ಟು!
ಇದು ಸನ್ನಿ ಲಿಯೋನ್ ಅವರು ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆಯುತ್ತಿದ್ದಾರೆ. ಸದ್ಯ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯು/ಐ’ ಸಿನಿಮಾದಲ್ಲಿ ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಸನ್ನಿ ಲಿಯೋನ್. ಈ ಮೊದಲು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡು ಚಪ್ಪಾಳೆ ಗಿಟ್ಟಿಸುತ್ತಿದ್ದರು ನಟಿ ಸನ್ನಿ ಲಿಯೋನ್. ಆದರೆ, ಈಗ ಪಾತ್ರವನ್ನು ಪೋಷಣೆ ಮಾಡಿ ಪ್ರಶಂಸೆ ಪಡೆಯುವಷ್ಟು ಬೆಳೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA