ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚಳ್ಳಕೆರೆ ರಸ್ತೆಯಲ್ಲಿರುವ ಕೃಷಿ ಇಲಾಖೆಯಲ್ಲಿ ಕೃಷಿ ಉಪಕರಣಗಳನ್ನು ಪಡೆದುಕೊಳ್ಳಲು ಆಗಮಿಸುತ್ತಿರುವ ರೈತರನ್ನು ಎನ್ ಒ ಸಿ ಮೊದಲಾದ ಕಾರಣಗಳನ್ನು ಮುಂದಿಟ್ಟು ಸತಾಯಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ.
50ರಿಂದ ನೂರು ಕಿ.ಮೀ. ದೂರದಿಂದ ಆಗಮಿಸುತ್ತಿರುವ ರೈತರು ಕೃಷಿ ಇಲಾಖೆಗೆ ಆಗಮಿಸಿದ ವೇ, ಎನ್ ಒ ಸಿ ಮೊದಲಾದ ಕಾರಣಗಳನ್ನು ನೀಡಿ ವಾಪಸ್ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದೇ ನಮಗೆ ಕೆಲಸವಾಗಿದೆ ಎಂದು ಧರ್ಮಪುರ ಹೋಬಳಿ ಸಕ್ಕರ ಗ್ರಾಮದ ವಾಸಿ ರೈತ ರಂಗಸ್ವಾಮಿ ಅಳಲು ತೋಡಿಕೊಂಡಿದ್ದಾರೆ.
ಕೃಷಿ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಗಳು ಸಹ ರೈತರ ಬಳಿ ನಿರ್ಲಕ್ಷ್ಯ ತನ ತೋರುತ್ತಿದ್ದು, ರೈತರ ಜೊತೆಗೆ ಅಗೌರವದಿಂದ, ತಿರಸ್ಕಾರ ಭಾವದಿಂದ ನಡೆದುಕೊಳ್ಳುತ್ತಿದ್ದಾರೆ ರಂಗಸ್ವಾಮಿ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ನನಗೆ ಮಾತ್ರವಲ್ಲ, ಕೃಷಿ ಇಲಾಖೆಗೆ ಬರುತ್ತಿರುವ ಪ್ರತಿಯೊಬ್ಬರಿಗೂ ಇಂತಹ ಅನುಭವವಾಗುತ್ತಿದೆ. ಇಲ್ಲಿನ ಅಧಿಕಾರಿಗಳು ರೈತರನ್ನು ಗದರಿ ದರ್ಪದಿಂದ ನಡೆದುಕೊಳ್ಳುವಂತಹ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿ, ಬೇಸರ ವ್ಯಕ್ತಪಡಿಸಿದರು.
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB