ಕೊರಟಗೆರೆ: ನೊಣದ ಕಾಟದಿಂದ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಊರು ತೊರೆದ ಘಟನೆ ನಡೆದಿದ್ದು, ಕೊರಟಗೆರೆ ತಾಲೂಕಿನ ಬೋಮ್ಮಲದೇವಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತೊಗರಿಘಟ್ಟ ಗ್ರಾಮದ ಪಕ್ಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೋಳಿ ಫಾರಂನಿಂದಾಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ.
ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಈ ಕೋಳಿ ಸಾಕಾಣಿಕೆ ಫಾರಂ ಸಾಕಲಾಗುತ್ತಿದೆ. ಪಕ್ಕದಲ್ಲಿಯೇ ಶ್ರೀ ಆದಿ ತಿಮ್ಮಪ್ಪ ದೇವಸ್ಥಾನ ಇದ್ದು, ಈ ಭಾಗದ ಸುತ್ತ ಮುತ್ತಲಿನ ಸುಮಾರು 15-20 ಗ್ರಾಮದವರು ಮದುವೆ, ಮುಂಜಿ, ನಾಮಕರಣ ಸೇರಿದಂತೆ ಇಂತಹ ಶುಭ ಸಮಾರಂಭಗಳನ್ನು ಮಾಡುತಿದ್ದರು. ಆದರೆ ಈ ಕೋಳಿ ಫಾರಂ ಆದಾಗಿನಿಂದ ನೊಣಗಳಕಾಟ ಹಾಗೂ ಗೊಬ್ಬರದ ಗಬ್ಬುನಾತ ಬೀರುತ್ತಿದೆ. ಈ ದುರ್ವಾಸನೆಗೆ ತೊಗರಿಘಟ್ಟ,ಮುದ್ದನಹಳ್ಳಿ ಬಿ.ಡಿ.ಪುರ ದುಗ್ಗೆನಹಳ್ಳಿ, ಶಕುನಿತಿಮ್ಮನಹಳ್ಳಿ , ಸೇರಿದಂತೆ ಸುಮಾರು ಹದಿನೈದು ಇಪ್ಪತ್ತು ಹಳ್ಳಿಗಳ ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಜನ ಮಾತ್ರವಲ್ಲದೇ ಜಾನುವಾರುಗಳು ಕೂಡ ನೊಣದ ಕಾಟದಿಂದ ಸಂಕಷ್ಟಕ್ಕೀಡಾಗಿದೆ. ಕುರಿ, ಮೇಕೆಗಳ ಕಣ್ಣು ಮೂಗು ಬಾಯಿ ಮೇಲೆ ನೋಟಗಳ ಕಾಟದಿಂದ ಗಾಯಗಳಾಗಿದೆ. ಸಂಜೆ ಬೆಳಿಗ್ಗೆ ಹಾಲು ಕರೆದರೆ ಹಾಲಿನಲ್ಲಿ ನೋಟಗಳು.ಇನ್ನೂ ಟೊಮೋಟೊ ಬದನೆ ಸೇರಿದಂತೆ ತರಕಾರಿಗಳು ಯಾವ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಡಿಸಿದ್ದಾರೆ.
ಕೋಳಿ ಫಾರಂ ಪ್ರಾರಂಭ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯಬೇಕು. ಅನುಮತಿ ನೀಡಲು ಗ್ರಾಮ, ಹಳ್ಳಿ, ದೇವಸ್ಥಾನ, ಶಾಲೆಗಳಿಂದ ಇಂತಿಷ್ಟು ದೂರ ಇರಬೇಕು ಎಂಬ ನಿಯಮಗಳು ಇರುತ್ತವೆ. ಆದರೆ ಇವೆಲ್ಲವನ್ನೂ ನಿರ್ಲಕ್ಷಿಸಿ ಅಧಿಕಾರಿಗಳು ಅನುಮತಿ ನೀಡಿದ್ದಾರೆಯೇ? ಅನುಮತಿ ನೀಡಿದವರು ಯಾರು? ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೂಡಲೇ ಸಂಬಂಧ ಪಟ್ಟ ತಹಶೀಲ್ದಾರ್, ಡಿ.ಸಿ. ಸ್ಥಳಕ್ಕೆ ಬಂದು ನಾವು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ, ಈ ಗೀತಾ ಕೋಳಿ ಫಾರಂ ಅನುಮತಿ ರದ್ದುಗೊಳಿಸಿ ಎಂದು ಒತ್ತಾಯಿಸಿದ್ದಾರೆ ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz