ಗರ್ಭಪಾತಕ್ಕೆ ಅನುಮತಿ ಕೋರಿ 17 ವರ್ಷದ ಬಾಲಕಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಾಗ ಮನುಸ್ಮೃತಿಯನ್ನು ಓದಲು ಗುಜರಾತ್ ಹೈಕೋರ್ಟ್ ಸಲಹೆ ನೀಡಿದೆ. ಹೆಣ್ಣುಮಕ್ಕಳು 14-15ನೇ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17ನೇ ವಯಸ್ಸಿನಲ್ಲಿ ಹೆರಿಗೆಯಾಗುವುದು ಸಹಜ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಈ ಹಿಂದೆ ಬಹಳ ಸಹಜ ಸಂಗತಿಯಾಗಿದ್ದು, ಮನುಸ್ಮೃತಿ ಓದಿಲ್ಲದಿದ್ದರೆ ಓದಿ ಎಂದು ಕೋರ್ಟ್ ಸಲಹೆ ನೀಡಿದೆ.
ಅತ್ಯಾಚಾರಕ್ಕೊಳಗಾದ ಏಳು ತಿಂಗಳ ಗರ್ಭಿಣಿಯಾಗಿರುವ 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಬಾಲಕಿಯ ಪರವಾಗಿ ಹಾಜರಾದ ಸಿಕಂದರ್ ಸೈದ್, ಹೆರಿಗೆಯ ದಿನಾಂಕ ಆಗಸ್ಟ್ 18 ಆಗಿರುವುದರಿಂದ ಈ ವಿಷಯವನ್ನು ಶೀಘ್ರವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು ಕೋರಿದರು.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಮೀರ್ ಜೆ ದವೆ ಅವರು 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಸಹಜ. ಹುಡುಗಿಯರು ಹುಡುಗರಿಗಿಂತ ಮೊದಲು ಪ್ರಬುದ್ಧತೆಯನ್ನು ಪಡೆಯುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಬಾಲಕಿಯನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ರಾಜ್‌ಕೋಟ್‌ನ ವೈದ್ಯಕೀಯ ಅಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿದೆ.ಹೆಣ್ಣು ಮತ್ತು ಹುಟ್ಟುವ ಮಗು ಆರೋಗ್ಯವಾಗಿದ್ದರೆ ಗರ್ಭಪಾತಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


