ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ನ.27 ರಂದು ಸಂಜೆ 4 ಗಂಟೆಗೆ ಬಸ್ ನಿಲ್ದಾಣ, ಬೆಳ್ಳಾವಿ ಇಲ್ಲಿ 538ನೇ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಮತ್ತು 70ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
ಕನಕ ಯುವಕ ಸಂಘ ಹಾಗೂ ಹಾಲು ಮತ ಮಹಾಸಭಾ ತುಮಕೂರು ಗ್ರಾಮಾಂತರ ಘಟಕ ಇವರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಮಹಾ ಸಂಸ್ಥಾನ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ ಒಡೆಯರ್, ಕಾರದೇಶ್ವರ ಮಠದ ಶ್ರೀ ಕಾರದವೀರಬಸವ ಸ್ವಾಮಿಗಳು ವಹಿಸುವರು.
ಅಧ್ಯಕ್ಷತೆಯನ್ನು ಮಾಜಿ ವಿ.ಪ.ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸಲಿದ್ದು, ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಶ್ರೀನಿವಾಸ್ ನೆರವೇರಿಸುವರು. ಬಿಎಂಟಿಸಿ ವಕ್ತಾರ ನಿಖಿತಾಜ್ ಮಾರ್ಯ ಭಾಷಣಕಾರರಾಗಿ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ಡಾ.ಎಸ್.ನಾಗಣ್ಣ, ಲಕ್ಷ್ಮೀನರಸಿಂಹರಾಜು, ಟಿ.ಆರ್. ಸುರೇಶ್, ಮೈಲಪ್ಪ, ಸತೀಶ್, ರಘುರಾಂ, ಪುಟ್ಟರಾಜು, ಅನಿಲ್ಕುಮಾರ್, ಬಿ.ಸಿ.ಉಮೇಶ್, ಇಂದ್ರಣ್ಣ, ಬಿ.ಎಸ್.ಮಂಜುನಾಥ್, ಗರುಡಪ್ಪ, ಮೂರ್ತಪ್ಪ ಶಂಕರ್, ಸುಧೀರ್ಮೂರ್ತಿ, ಮನೋಜ್, ಎ.ಮಹಲಿಂಗಯ್ಯ, ಕಿಚ್ಚ ಕಿರಣ್ ಕುಮಾರ್, ವಿಶೇಷ ಆಹ್ವಾನಿತರಾಗಿ ಆರ್.ಎಸ್.ಮಲ್ಲಿಕಾರ್ಜುನ್, ಸಿದ್ದರಾಜು, ಸುಪ್ರಿಯ ಶಿವರಾಜು, ಲೀಲಾವತಿಮಂಜು, ಮಹಾಲಕ್ಷ್ಮಿ ಪಾಲಾಕ್ಷಯ್ಯ, ರುದ್ರೇಶ್, ಶಿವಣ್ಣ, ಪುಟ್ಟಮ್ಮ, ಎನ್.ಆರ್.ವೀರಪ್ಪ, ಕೇಶವಮೂರ್ತಿ, ಸಿದ್ದಪ್ಪ, ವಾಸುದೇವಮೂರ್ತಿ, ಬಿ.ಟಿ.ಚಿಕ್ಕಣ್ಣ ಅವರುಗಳು ಆಗಮಿಸುವರು.
ಇದೇ ಸಂದರ್ಭದಲ್ಲಿ ಶಂಕರಪ್ಪ, ರಂಗಸ್ವಾಮಯ್ಯ, ಶಿವರಾಜಯ್ಯ, ನರಸಿಂಹಮೂರ್ತಣ್ಣ ಅವರುಗಳನ್ನು ಸನ್ಮಾನಿಸಲಾಗುವುದು. ನಂತರ ರಾಮು ಮೆಲೋಡೀಸ್ ಇವರಿಂದ ಆರ್ಕೆಸ್ಟಾ ಮೂಡಿಬರಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


