15 ದಿನಗಳ ಕಾಲ ನಡೆದ ಬಜೆಟ್ ಅಧಿವೇಶನಕ್ಕೆ ತೆರೆ ಬಿದ್ದಿದ್ದು, ಪ್ರತಿಪಕ್ಷಗಳ ಗೈರಿನಲ್ಲೇ ಧನ ವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.
ಸದನ ನಡೆಸಲು ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು. ಬಜೆಟ್ ಮೇಲಿನ ಚರ್ಚೆಯ ನಂತರ ಮಾತನಾಡಿದ ಸಭಾನಾಯಕ ಬೋಸರಾಜ್, ಕಲಾಪ ನಡೆಸಲು ಸಹಕರಿಸಿದ ಸದಸ್ಯರು, ಸಚಿವರು, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ, ಸಭಾನಯಕರ ನಂತರ ಪ್ರತಿಪಕ್ಷ ನಾಯಕರು ಮಾತನಾಡಬೇಕಿತ್ತು ಆದರೆ ಅವರು ಯಾರೂ ಇಲ್ಲ ನೀವೇ ಬಿಜೆಪಿ ಪರ ಮಾತನಾಡಿ ಎಂದು ಬಿಜೆಪಿಯ ರೆಬೆಲ್ ಸದಸ್ಯ ಹೆಚ್. ವಿಶ್ವನಾಥ್‌ಗೆ ಸೂಚಿಸಿದರು. ನಾನೇ ವಿರೋಧ ಪಕ್ಷದ ನಾಯಕ ಈಗ ಎನ್ನುತ್ತಲೇ ಕಲಾಪ ನಡೆಸಲು ಸಹಕರಿಸಿದ ಎಲ್ಲರಿಗೂ ವಿಶ್ವನಾಥ್ ಧನ್ಯವಾದ ಅರ್ಪಣೆ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


