ಇಟಲಿಯ ಓರ್ವ ವ್ಯಕ್ತಿಗೆ ಮೂರು ಮಾರಕ ವೈರಸ್ ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. ಆತನಿಗೆ ಕೊರೋನಾ, ಮಂಕಿಪಾಕ್ಸ್ & ಎಚ್‌ಐವಿ ಬಾಧಿಸಿವೆ. ಇತ್ತೀಚೆಗೆ, ಆತ ಸ್ಪೇನ್‌ನಲ್ಲಿ ಬೇರೊಬ್ಬ ಯುವಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಹೊಂದಿದ್ದ ಎಂದು ವೈದ್ಯರು ತಿಳಿಸಿದ್ದಾರೆ. 9 ದಿನಗಳ ನಂತರ ಕೋವಿಡ್, ಮಂಕಿಪಾಕ್ಸ್ ಮತ್ತು ಎಚ್‌ಐವಿ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷೆ ನಡೆಸಿದಾಗ ಆತನಲ್ಲಿ ಮೂರು ವೈರಸ್‌ಗಳು ದೃಢಪಟ್ಟಿವೆ.
ಅಲ್ಲಿಂದ ಮರಳಿ ಮನೆಗೆ ಬಂದವನೇ ಜ್ವರ, ಕಂಟಲು ನೋವು ಎಂದು ಮಲಗಿಬಿಟ್ಟಿದ್ದ. ವೈದ್ಯರಿಗೆ ತೋರಿಸಿದಾಗ ಕೊರೊನಾ ಪರೀಕ್ಷೆ (Covid 19 Test) ಮಾಡಿಸಿದ. ಪರೀಕ್ಷೆಯಲ್ಲಿ ಪಾಸಿಟಿವ್ ಬಂತು.ಕೊವಿಡ್ ಬಂತು ಅಂದುಕೊಂಡು ಎರಡೇ ದಿನಕ್ಕೆ ದೇಹದ ಭಾಗಗಳಲ್ಲಿ ಗುಳ್ಳೆಗಳು ಏಳಲಾರಂಭಿಸಿದವು. ಆ ಗುಳ್ಳೆಗಳು ನೋಯುತ್ತಿದ್ದವು.
ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯ ಆರೋಗ್ಯ ಸದ್ಯ ಸ್ಥಿರವಾಗಿದೆ. ಕೋವಿಡ್-19 ಮತ್ತು ಮಂಕಿಪಾಕ್ಸ್‌ನಿಂದ ಚೇತರಿಸಿಕೊಂಡ ನಂತರ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್ಐವಿ ಸೋಂಕು ಮಾತ್ರ ಹಾಗೇ ಇದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy