ಸರಗೂರು: ಅಧಿಕಾರಿಗಳು ಸಭೆಗೆ ಬರುವಾಗ ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಬಂದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯ. ಆದರೆ ಅಪೂರ್ಣ ಮಾಹಿತಿಯೊಂದಿಗೆ ಬಂದರೆ ಸಭೆ ಮಾಡುವುದಾದರೂ ಹೇಗೆ ಎಂದು ಅಧಿಕಾರಿಗಳನ್ನು ಶಾಸಕ ಅನಿಲ್ ಚಿಕ್ಕಮಾದು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಅಕ್ರಮ ಸಕ್ರಮ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ, ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡಬೇಕೆಂದರೆ ಜಮೀನಿಗೆ ಸಂಬಂಧಿಸಿದ ಕಡತಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತಯಾರಿಸಿ ಸೂಕ್ತ ಕಡತ ದೊಂದಿಗೆ ಬಂದರೆ ಸಾಗುವಳಿ ನೀಡಲು ಸಾಧ್ಯ ಆದರೆ ಅಧಿಕಾರಿಗಳು ಅಪೂರ್ಣ ದಾಖಲೆಗಳೊಂದಿಗೆ ಸಭೆಗೆ ಬಂದರೆ ರೈತರಿಗೆ ಯಾವ ರೀತಿ ಅನುಕೂಲ ಮಾಡಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಮಾರ್ಗ ಸೂಚಿ ಪ್ರಕಾರ ಕ್ಷೇತ್ರದಲ್ಲಿ ಸಾವಿರಕ್ಕೂ ಹೆಚ್ಚು ರೈತರಿಗೆ ವಿತರಣೆ ಮಾಡಿದ್ದೇನೆ ಅದರೂ 50, 53, 57 ನಮೂನೆ ಅರ್ಜಿ ಸಲ್ಲಿಸಿದ ಇನ್ನೂ ಸಾಕಷ್ಟು ಅರ್ಜಿಗಳು ಬಾಕಿ ಇದ್ದು ಇದಕ್ಕೆ ಕಾರಣ ನೀಡಿ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಹಾಗೂ ರೈತರಿಂದ ಕಿಮ್ಮತ್ತು ಕಟ್ಟಿದ್ದರು ಕೂಡ ಸಾಗುವಳಿ ಹಕ್ಕು ಪತ್ರ ವಿತರಣೆ ನೀಡುತ್ತಿಲ್ಲ ಎಂದು ಮಾಹಿತಿ ಬಂದಿದೆ. ಯಾಕೆ ವಿಲೇವಾರಿ ಮಾಡುತ್ತಿಲ್ಲಾ ಎಂದು ಪ್ರಶ್ನೆ ಕಾಡುತ್ತಿದೆ ಎಂದರು.
ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಲ್ಕೇಗರು ಮತ್ತು ರಾಜಸ್ವನಿಕ್ಷಕರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರ ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು. ರೈತರು ಸಾಗುವಳಿ ಪತ್ರಕ್ಕೆ ಅರ್ಜಿಯನ್ನು ನೀಡಿದ್ದಾರೆ. ಅದರೆ ನೀವುಗಳು ಏನೂ ಮಾಡುತ್ತಿದ್ದೀರಿ. ನಾವುಗಳು ಕಮಿಟಿಯಲ್ಲಿ ಸಾಗುವಳಿ ಪತ್ರ ಮಂಜೂರಾತಿ ಮಾಡಿದ್ದರು ನೀವುಗಳು ಯಾಕೆ ವಿತರಣೆ ಮಾಡಿಲ್ಲ ಎಂದು ನನಗೆ ಉತ್ತರ ನೀಡಿ ಎಂದು ಪಟ್ಟು ಹಿಡಿದರು.
ನೀವುಗಳು ಯಾವುದೇ ವಿಷಯವನ್ನು ನಾನು ಕೇಳಿದರು ನೀವುಗಳು ಅರಣ್ಯ ಇಲಾಖೆ ಗೆ ಸೇರಿದೆ ಎಂದು ಒಂದೇ ಉತ್ತರ ಕೊಡುತ್ತಿದ್ದಿರಾ ಯಾಕೇ ಏನೂ ಅಂತ ನನಗೆ ಗೊತ್ತಾಗುತ್ತಿಲ್ಲ ಎಂದರು. ನೀವುಗಳು ಈ ರೀತಿ ಉತ್ತರ ಕೊಟ್ಟರೆ ಸರ್ಕಾರ ಏನಿಕ್ಕೆ ಕಮೀಟಿ ಮಾಡಬೇಕು. ಎಲ್ಲವನ್ನು ನೀವೇ ಮಾಡಿಸಿಕೊಂಡರೆ ನಮಗೆ ಯಾಕೆ ಹೇಳುತ್ತಿರಾ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರೈತರ ಜಮೀನಿಗೆ ಎಷ್ಟು ಜನರಿಗೆ ಖಾತೆ ಹಾಗೂ ಫೋಡಿ ಮಾಡಿದ್ದಿರಾ, ಇನ್ನೂ ಎಷ್ಷು ಜನರಿಗೆ ಮಾಡಬೇಕು ಹೇಳಿ ಎಂದು ಪಟ್ಟು ಹಿಡಿದರು.
ನಾವುಗಳು ಸಾರ್ವಜನಿಕರು ಹಾಗೂ ರೈತರಿಗೆ ಯಾವ ಉತ್ತರ ನೀಡಬೇಕು ಹೇಳಿ ಎಂದು ಅವರಿಗೆ ಪ್ರಶ್ನೆ ಮಾಡಿದರು.ಅದಕ್ಕೆ ಅಧಿಕಾರಿಗಳು ಯಾವುದೇ ಕೂಡಾ ಉತ್ತರ ನೀಡಿದೆ ಸುಮ್ಮನೆಯಾಗಿದ್ದರು.
ಮುಂದಿನ ಸಭೆಯಲ್ಲಿ ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂದರೆ ನಿಮ್ಮ ಮೇಲೆ ಸೂಕ್ತ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಕ್ರಮ ಅಕ್ರಮ ಸಮಿತಿ ಸದಸ್ಯರು ಪ್ರಭುಸ್ವಾಮಿ, ಶಿವಶಂಕರ್, ಯಶೋಧ,ತಹಸೀಲ್ದಾರ್ ರುಕೀಯಾ ಬೇಗಂ.ಉಪತಹಸೀಲ್ದಾರ್ ಸುನೀಲ್, ರವಿಂದ್ರ, ರಾಜಸ್ವ ನಿರೀಕ್ಷಕರು ಮುಜೀಬ್,ಶ್ರೀನಿವಾಸ, ಪಿಎಸ್ಐ ಗೋಪಾಲ್, ನೂರುಲ್ಲಾ, ಶಾಸಕರ ಕಾರ್ಯದರ್ಶಿ ಗಳು ಮಂಜುನಾಥ್, ಸುದರ್ಶನ್, ರಘು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


